24.03.2025 ರಿಂದ 29.03.2025

ಕಾರ್ಕಳ :- ಇಲ್ಲಿನ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲಾಮಕ್ಕಳ ಬೇಸಿಗೆ ಶಿಬಿರದ ಆರಂಭೋತ್ಸವ ಆಂಗ್ಲಮಾಧ್ಯಮ
ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರದ
ಆರಂಭೋತ್ಸವ ಕಾರ್ಯಕ್ರಮ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲಾಮಕ್ಕಳ ಬೇಸಿಗೆ ಶಿಬಿರದ ಆರಂಭೋತ್ಸವ
ಸಭಾAಗಣದಲ್ಲಿ ದಿನಾಂಕ: 24.03.2025ರಂದು ಅದ್ದೂರಿಯಾಗಿ
ನಡೆಯಿತು. ಈ ಶಿಬಿರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ
ಕಾರ್ಕಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ
ಶ್ರೀಮತಿ ಗಿರಿಜಮ್ಮ ಎಸ್.ಆರ್‌ರವರು ಬೇಸಿಗೆ ಶಿಬಿರವನ್ನು
ಉದ್ದೇಶಿಸಿ ಬೇಸಿಗೆ ಶಿಬಿರದ ಪ್ರಾಮುಖ್ಯತೆಯನ್ನು ಮತ್ತು
ಮಕ್ಕಳಲ್ಲಿ ಶಿಸ್ತಿನ ಅರಿವು ಎಂಬ ವಿಷಯಗಳ ಕುರಿತು
ತಿಳಿಸುತ್ತಾ ಮಕ್ಕಳಿಗೆ ಶುಭ ಹಾರೈಸಿದರು. ಇನ್ನೋರ್ವ
ಮುಖ್ಯ ಅತಿಥಿಯಾದಂತಹ ಸೈಂಟ್ ಜೋಸೆಫ್ ಚರ್ಚ್
ಬೆಳ್ಮಣ್ಣು ಇಲ್ಲಿನ ರೆ| ಫಾ| ಅರ್ನೊಲ್ಡ್ ಮಥಾಯಿಸ್ ಶಿಬಿರಕ್ಕೆ
ಆಗಮಿಸಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಪ್ರತಿ
ಮಕ್ಕಳಲ್ಲಿಯೂ ವಿಭಿನ್ನವಾದ ವ್ಯಕ್ತಿತ್ವ ಇರುತ್ತದೆ
ಮತ್ತು ಆ ವ್ಯಕ್ತಿತ್ವವನ್ನು ನಾವು ಇಂತಹ ಶಿಬಿರದಲ್ಲಿ
ಯಾವ ರೀತಿ ಸದುಪಯೋಗ ಪಡಿಸಿಕೊಳ್ಳಬೇಕು ಎಂಬ
ವಿಚಾರದ ಕುರಿತು ಮಾತನಾಡಿದರು. ಶಿಬಿರದ
ಅಧ್ಯಕ್ಷತೆಯನ್ನು ವಹಿಸಿದ್ದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲಾಮಕ್ಕಳ ಬೇಸಿಗೆ ಶಿಬಿರದ ಆರಂಭೋತ್ಸವ ಟ್ರಸ್ಟ್ನ
ಸದಸ್ಯರಾದ ಡಾ| ಪೀಟರ್ ಫೆರ್ನಾಂಡಿಸ್ ಅವರು ಚಟುವಟಿಕೆ
ಆಧಾರಿತವಾದ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ತಮ್ಮನ್ನು
ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಿ ಎಂದು
ಶುಭಹಾರೈಸಿದರು ಹಾಗೂ ಪ್ರಾಥಮಿಕ ವಿಭಾಗದ
ಮುಖ್ಯೋಪಾಧ್ಯಾಯರಾದ ಶ್ರೀ ರುಡಾಲ್ಫ್ ಕಿಶೋರ್
ಲೋಬೋರವರು ಶಿಬಿರದ ಕುರಿತು ಪ್ರಾಸ್ತಾವಿಕವಾಗಿ
ಮಾತನಾಡಿದರು. ಅಂತೆಯೇ ಕಾಲೇಜು ವಿಭಾಗದ
ಪ್ರಾಂಶುಪಾಲರಾದ ಶ್ರೀ ಲಕ್ಷ್ಮೀನಾರಾಯಣ ಕಾಮತ್,
ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀ
ಡೊಮಿನಿಕ್ ಅಂದ್ರಾದೆ, ಹಾಗೂ ಪ್ರಾಥಮಿಕ ವಿಭಾಗದ
ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷೆಯಾದ ಶ್ರೀಮತಿ
ಲಿನೆಟ್ ಮರಿನಾ ಡಿಸೋಜರವರು ವೇದಿಕೆಯಲ್ಲಿ
ಉಪಸ್ಥಿತರಿದ್ದರು. ಶಿಕ್ಷಕಿಯರಾದ ಶ್ರೀಮತಿ ರೂಪಾಲಿ ಶೆಟ್ಟಿ
ಸ್ವಾಗತಿಸಿ, ಶ್ರೀಮತಿ ಜಯಲಕ್ಷ್ಮೀರವರು ವಂದಿಸಿ ಮತ್ತು
ಶ್ರೀಮತಿ ವಿಜೇತಾ ಜೈನ್ ಕಾರ್ಯಕ್ರಮ ನಿರೂಪಿಸಿದರು.