22.8 C
Udupi
Monday, October 27, 2025
spot_img
spot_img
HomeBlogಕೋವಿಡ್ ಸೋಂಕು ಮತ್ತು ಅದರ ಲಸಿಕೆಯಿಂದ ಮಾನವನ ನರಮಂಡಲ ಮತ್ತು ಮೆದುಳಿನ ಮೇಲೆ ನೇರ ಪರಿಣಾಮ...

ಕೋವಿಡ್ ಸೋಂಕು ಮತ್ತು ಅದರ ಲಸಿಕೆಯಿಂದ ಮಾನವನ ನರಮಂಡಲ ಮತ್ತು ಮೆದುಳಿನ ಮೇಲೆ ನೇರ ಪರಿಣಾಮ ಬೀರಿದೆ: ಸಂಶೋಧನಾ ವರದಿ ಬಿಡುಗಡೆ ಮಾಡಿದ ನಿಮ್ಹಾನ್ಸ್

ಬೆಂಗಳೂರು: ನಿಮ್ಹಾನ್ಸ್‌ ವೈದ್ಯರ ಸಂಶೋಧನಾ ಸಂಸ್ಥೆಯು ಕೋವಿಡ್ ವ್ಯಾಕ್ಸೀನ್ ಕುರಿತು ವರದಿಯೊಂದನ್ನು ಬಹಿರಂಗಪಡಿಸಿದ್ದು ಅದೇನೆಂದರೆ ಕೋವಿಡ್‌-19 ಸೋಂಕು ಮತ್ತು ಕೋವಿಡ್‌ ಲಸಿಕೆಯಿಂದ ಮಾನವನ ನರಮಂಡಲ ಮತ್ತು ಮೆದುಳಿನ ಮೇಲೆ ನೇರ ಪರಿಣಾಮ ಆಗಿರುವುದು ಪತ್ತೆಯಾಗಿದೆ ಎಂದು ವರದಿ ಬಿಡುಗಡೆ ಮಾಡಿದೆ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌)ಯ ನರ ರೋಗ ತಜ್ಞೆ ಡಾ। ಎಂ.ನೇತ್ರಾವತಿ ಅವರ ನೇತೃತ್ವದಲ್ಲಿ ನಡೆದಿರುವ ಅಧ್ಯಯನದಲ್ಲಿ ಈ ಮಾಹಿತಿ ಬಯಲಾಗಿದೆ.

2020ರ ಮಾರ್ಚ್‌ ಮತ್ತು ಸೆಪ್ಟೆಂಬರ್‌ ಮಧ್ಯೆ ನಿಮ್ಹಾನ್ಸ್‌ನಲ್ಲಿ ದಾಖಲಾಗಿದ್ದ 3200 ನರರೋಗಿ ಸಂಬಂಧಿತ ರೋಗಿಗಳನ್ನು ಅದ್ಯಯನಕ್ಕೆ ಒಳಪಡಿಸಲಾಗಿದ್ದು, ಈ ಪೈಕಿ 120 ಮಂದಿ ಕೋವಿಡ್‌ ಸೋಂಕಿಗೆ ಒಳಗಾಗಿದ್ದರು. ಅಲ್ಲದೇ ನರ ಸಂಬಂಧಿ ಸಮಸ್ಯೆಗಳನ್ನು ಅನುಭವಿಸಿದ್ದರು. ಇವರಲ್ಲಿ ಮೂರರಿಂದ 84 ವರ್ಷದ ಒಳಗಿನವರಿದ್ದು, ಸರಾಸರಿ 49 ವಯಸ್ಸಿನವರು ಹೆಚ್ಚಿದ್ದರು. ಹೆಚ್ಚಿನ ರೋಗಿಗಳು ತೀವ್ರ ಜ್ವರದ ಜೊತೆಗೆ ಪ್ರಜ್ಞೆ ತಪ್ಪುವುದು(ಶೇ.47), ವಾಸನೆ ರಹಿತ (ಶೇ.14.2) ರೀತಿಯ ಲಕ್ಷಣಗಳನ್ನು ಹೊಂದಿದ್ದರು. ಕೋವಿಡ್‌ ವೈರಸ್‌ ಸೋಂಕಿನಿಂದಾಗಿ ನೇರವಾಗಿ ನರಮಂಡಲಕ್ಕೆ ಸಮಸ್ಯೆ ಆಗಿದೆ ಎಂದು ಅಧ್ಯಯನದಲ್ಲಿ ಬೆಳಕಿಗೆ ಬಂದಿದ್ದು ಈ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡವರ ಮೇಲೆ ದೀರ್ಘ ಕಾಲದ ನಿಗಾ ವಹಿಸುವ ಅಗತ್ಯತೆ ಇದೆ ಎಂದು ವೈದ್ಯರು ಸೂಚಿಸಿದ್ದಾರೆ.

2021ರ ಮೇ ತಿಂಗಳಿನಿಂದ ಡಿಸೆಂಬರ್‌ವರೆಗೆ ಕೋವಿಡ್‌ ಲಸಿಕೆ ಪಡೆದ 42 ದಿನಗಳ ಬಳಿಕ ನರ ರೋಗ ಸಮಸ್ಯೆಗೆ ಒಳಗಾಗಿ ನಿಮ್ಹಾನ್ಸ್‌ಗೆ ದಾಖಲಾದ 116 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ಪೈಕಿ 29 ಮಂದಿಗೆ ವ್ಯಾಕ್ಸಿನ್‌ ನೀಡಿದ ಬಳಿಕ ಇಮ್ಯೂನ್‌ ಸಿಸ್ಟಂ ತೊಂದರೆಗೀಡಾಗಿ ನರರೋಗ ಸಮಸ್ಯೆ ಪತ್ತೆಯಾಗಿದೆ.

ಈ ಪೈಕಿ 27 ಮಂದಿ ಕೋವಿಶೀಲ್ಡ್‌ ಲಸಿಕೆ ಪಡೆದವರಾಗಿದ್ದರೆ ಇಬ್ಬರು ಕೋವ್ಯಾಕ್ಸಿನ್‌ ಲಸಿಕೆ ಪಡೆದವರಿದ್ದರು. ಇವರಿಗೆ ಮೊದಲ ಡೋಸ್‌ ಪಡೆದ 16 ದಿನಗಳ ಬಳಿಕ ತೊಂದರೆ ಎದುರಾಗಿತ್ತು. ಆದರೂ ಸಾರ್ವತ್ರಿಕವಾಗಿ ನೋಡಿದರೆ ಕೋವಿಡ್‌ ಸೋಂಕು ಮತ್ತು ಲಸಿಕೆಯಿಂದಾಗಿ ನರರೋಗ ಸಮಸ್ಯೆಗೀಡಾದವರ ಸಂಖ್ಯೆ ಆತ್ಯಲ್ಪ ಎಂದು ವರದಿಯಲ್ಲಿ ವೈದ್ಯರು ತಿಳಿಸಿದ್ದಾರೆ. ದೀರ್ಘ ಕೋವಿಡ್‌ ಪರಿಣಾಮಗಳ ಬಗ್ಗೆಯೂ ಅಧ್ಯಯನ ವರದಿಯಲ್ಲಿ ಹೇಳಲಾಗಿದ್ದು, ಕೆಲವರ ನಡವಳಿಕೆಯಲ್ಲಿ ವ್ಯತ್ಯಾಸಗಳು ಆಗಿರುವುದು ಕಂಡುಬಂದಿದೆ. ಆತಂಕ, ನಿರಾಸಕ್ತಿ, ನೆನಪಿನ ಶಕ್ತಿ ಕುಂದುವಿಕೆ ಇತ್ಯಾದಿ ಲಕ್ಷಣಗಳು ದೀರ್ಘ ಕೋವಿಡ್‌ನಿಂದ ಆಗಿರುವುದು ಎಂದು ಪತ್ತೆಯಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page