
ಕೋಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಸಿಬಿಐ ನಡೆಸಿದ ಆರು ದಿನಗಳ ತನಿಖೆಯಲ್ಲಿ ಸಂಜಯ್ ರಾಯ್ ಪಾತ್ರ ಮಾತ್ರವಿದೆ. ಬೇರೆಯವರು ಭಾಗಿಯಾಗಿರುವ ಕುರಿತು ಯಾವುದೇ ಕುರುಹಿಲ್ಲ ಎಂದು ಮೂಲಗಳು ತಿಳಿಸಿವೆ.
ರಾಯ್ ಕೋಲ್ಕತ್ತಾ ಪೊಲೀಸರ ಮುಂದೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ, ಸಂಜಯ್ ರಾಯ್ ಹೇಳಿಕೆ ಬಗ್ಗೆ ಸಿಬಿಐ ಅನುಮಾನ ವ್ಯಕ್ತಪಡಿಸಿದ್ದು ಸಿಬಿಐ ಇಂದು ರಾಯ್ ಅವರ ಮನೋವಿಜ್ಞಾನ ಪರೀಕ್ಷೆಯನ್ನು ಮುಂದುವರಿಸಲಿದೆ. ಈ ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್‌ಗೆ ಭಾನುವಾರ ಸೈಕೋಮೆಟ್ರಿಕ್ ಪರೀಕ್ಷೆ ನಡೆಸಲಾಗಿತ್ತು.
ಸಿಬಿಐ ಹಗಲಿರುಳು ತನಿಖೆಯಲ್ಲಿ ನಿರತವಾಗಿದ್ದು, ಈ ಪ್ರಕರಣದ ವಿಚಾರಣೆಯನ್ನು ದೇಶದ ಸುಪ್ರೀಂ ಕೋರ್ಟ್‌ನಲ್ಲಿಯೇ ನಡೆಸಲಿದ್ದು, ನಾಳೆ ಅಂದರೆ ಮಂಗಳವಾರಕ್ಕೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ದೇಶದ 70 ಕ್ಕೂ ಹೆಚ್ಚು ಪದ್ಮ ಪ್ರಶಸ್ತಿ ಪುರಸ್ಕೃತ ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರ ಸುರಕ್ಷತೆಗಾಗಿ ಪ್ರತ್ಯೇಕ ಕಾನೂನು ಜಾರಿಗೆ ಒತ್ತಾಯಿಸಿ ಪ್ರಧಾನಿ ಮೋದಿಗೆ ಪತ್ರ ಕಳುಹಿಸಿದ್ದಾರೆ.













