
ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ವತಿಯಿಂದ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸಿ.ಟಿ. ರವಿ ಮತ್ತು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ದ ಕೋಮು ಪ್ರಚೋದನೆ, ವಕ್ಫ್ ಆಸ್ತಿಯ ಬಗ್ಗೆ ತಪ್ಪು ಮಾಹಿತಿ, ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಸಾಹುಲ್ ಹಮೀದ್, ಆಲ್ವಿನ್ ಡಿ’ಸೋಜಾ, ಮಹಮ್ಮದ್ ಬಪ್ಪಾಲಿಗೆ, ಆಲ್ವಿನ್ ಪ್ರಕಾಶ್, ಥೋಮಸ್, ಚೆರಿಯನ್, ಹಬೀಬ್ ಕಣ್ಣೂರ್, ಜಾರ್ಜ್, ಇಮ್ರಾನ್ ಎ.ಆರ್. ಉಪಸ್ಥಿತಿಯಲ್ಲಿ ದೂರು ಸಲ್ಲಿಸಿ ಕೋಮುದ್ವೇಷ ಹರಡಿಸಲು ಯತ್ನಿಸುತ್ತಿರುವ ಈ ಮೂವರ ವಿರುದ್ದವೂ ಕೂಡಲೇ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು ಎಂದು ತಿಳಿದುಬಂದಿದೆ.







