
ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ(ರಿ) ಕರ್ನಾಟಕ-ಕೇರಳ ಇದರ ವತಿಯಿಂದ ಕೊರಗ ಅಭಿವೃದ್ಧಿ ಸಂಘಟನೆ ಬಜಗೋಳಿ ವಲಯ, ಕಡಾರಿ ಇಲ್ಲಿ ಇಂದು ದಿನಾಂಕ-1-12-2024 ರಂದು ವಿಶ್ವ ಮಾನವ ಹಕ್ಕುಗಳ ಪಕ್ಷಾಚರಣೆಯ ಅಂಗವಾಗಿ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು ;ವಿ.ಸುರೇಶ್ ನ್ಯಾಯವಾದಿ ಕಾರ್ಕಳ ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸೆ,ದೌರ್ಜನ್ಯ ಹಾಗು ಪೋಕ್ಸೋ ಕಾಯಿದೆಯ ಕುರಿತು ಮಾಹಿತಿ ನೀಡಿದರು.

ನಂತರ ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯರಾದ ಗಿರೀಶ್ ರವರು ಹೆಚ್.ಐ.ವಿ ಮತ್ತು ಏಡ್ಸ ರೋಗದ ಕುರಿತು ಮಾಹಿತಿ ನೀಡಿದರು.ಈ ಸಂಧರ್ಬದಲ್ಲಿ ಬಜಗೋಳಿ ಸಂಘದ ಅಧ್ಯಕ್ಷರಾದ ರವಿ,ಕಾರ್ಯದರ್ಶಿ ವನಿತಾ,ಕೋಶಾಧಿಕಾರಿ ಸುರೇಶ್ ಹಾಗು ಸಮುದಾಯದ ಹಿರಿಯರು ಕಿರಿಯರು ಭಾಗವಹಿಸಿ ಮಾಹಿತಿ ಪಡೆದುಕೊಂಡರು.




















