ಶಬರಿಮಲೆ: ತಿರುವಾಂಕೂರು ದೇವಸ್ವಂ ಮಂಡಳಿಯು ದಿನದಿಂದ ದಿನಕ್ಕೆ ಇತರ ರಾಜ್ಯಗಳ ಭಕ್ತರ ಒಳಹರಿವಿನಲ್ಲಿ ತೀವ್ರ ಹೆಚ್ಚಳದಿಂದ ಹಿಂದಿನ ತೀರ್ಥಯಾತ್ರೆಗೆ ಹೋಲಿಸಿದರೆ ಕೇರಳದ ಶಬರಿಮಲೆಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಸುಮಾರು 15 ಲಕ್ಷದಷ್ಟು ಹೆಚ್ಚಳವಾಗಲಿದೆ ಎಂದು ನಿರೀಕ್ಷೆ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲು ನೀಲಕಲ್ನಿಂದ ಸನ್ನಿಧಾನದವರೆಗೆ ಹೆಚ್ಚುವರಿ ಸೌಲಭ್ಯಗಳನ್ನು ಸ್ಥಾಪಿಸಲಾಗಿದ್ದು ದಟ್ಟಣೆಯನ್ನು ಕಡಿಮೆ ಮಾಡಲು ಪಂಪಾ ಮತ್ತು ನೀಲಕಲ್ನಲ್ಲಿ ಹೆಚ್ಚುವರಿ ಪಾರ್ಕಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹಿರಿಯ ಮಹಿಳೆಯರು ಮತ್ತು ಮಕ್ಕಳಿಗಾಗಿ ಸೌಲಭ್ಯ ಕೇಂದ್ರವನ್ನು ಪಂಪಾದಲ್ಲಿ ತೆರೆಯಲಾಗಿದೆ ಎಂದು ಟ್ರಾವಂಕೂರು ದೇವಸ್ವಂ ಮಂಡಳಿ ಮುಖ್ಯಸ್ಥ ಪಿ.ಎಸ್.ಪ್ರಶಾಂತ್ ಮಾಹಿತಿ ನೀಡಿದ್ದಾರೆ