
ಹೊಸದಿಲ್ಲಿ: ದೆಹಲಿ ಸಿಎಂ ಆತಿಷಿ ಮರ್ಲೆನಾ ಹಾಗೂ ಪಂಜಾಬ್ ಸಿಎಂ ಭಗವಂತ್ ಮಾನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನನ್ನು ಕೊಲ್ಲಲು ಕೇಂದ್ರ ಸರ್ಕಾರ ಹಾಗೂ ದಿಲ್ಲಿ ಪೊಲೀಸರು ಪಿತೂರಿ ನಡೆಸಿದ್ದು ಇದಕ್ಕೆ ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರು ಆದೇಶ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ನಡೆಸುತ್ತಿರುವ ಪ್ರಚಾರ ರ್ಯಾಲಿಗಳಲ್ಲಿ ಅವರ ಮೇಲೆ ಹಲ್ಲೆ ನಡೆಸಿದ್ದು ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಕೇಜ್ರಿವಾಲ್ ಅವರಿಗೆ ನೀಡುತ್ತಿದ್ದ ಭದ್ರತೆಯನ್ನು ಪುನ:ಸ್ಥಾಪಿಸಬೇಕು ಎಂದು ಮನವಿ ಮಾಡಿದ್ದಾರೆ.





















