
ಕಾರ್ಕಳ: ಫೈಯರ್ ಸೀಸನ್ ಸಮೀಪಿಸುತ್ತಿರುವ ಹಿನ್ನೆಲೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭದ್ರತೆ ಹಾಗೂ ವನ್ಯಜೀವಿ ಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಹಾಗೂ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವ ಚಾರಣ ಮಾರ್ಗಗಳಲ್ಲಿ ಅರಣ್ಯ ಇಲಾಖೆಯು ತಾತ್ಕಾಲಿಕ ನಿರ್ಬಂಧ ವಿಧಿಸಿದೆ.
ಜನವರಿ 14ರಿಂದ ಮುಂದಿನ ಆದೇಶದವರೆಗೆ ಈ ನಿರ್ಬಂಧಗಳು ಜಾರಿಯಲ್ಲಿರಲಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದು ಈ ಕುರಿತು ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ಮಾಡುವುದಲ್ಲದೆ ಸೂಚನಾ ಫಲಕ ಅಳವಡಿಸಲು ತಿಳಿಸಿದ್ದಾರೆ. ಜೊತೆಗೆ ಅಗತ್ಯ ಕಾವಲುಗಾರರನ್ನು ನಿಯೋಜನೆ ಮಾಡುವಂತೆ ಸೂಚಿಸಲಾಗಿದೆ.
ನಿಷೇಧಿತ ಚಾರಣ ಮಾರ್ಗಗಳು:
- ಗಂಗಡಿಕಲ್ ಚಾರಣ
- ಕುದುರೆಮುಖ ಚಾರಣ
- ಕುರಿಂಜಾಲು ಚಾರಣ
- ವಾಲಿಕುಂಜ ಚಾರಣ – ಎಸ್.ಕೆ. ಬೋರ್ಡರ್
- ವಾಲಿಕುಂಜ ಚಾರಣ – ಕೆರ್ವಾಶೆ
- ನರಸಿಂಹ ಪರ್ವತ- ಕಿಗ್ಗ
- ನರಸಿಂಹ ಪರ್ವತ- ಮಳಂದೂರು
- ಕೊಡಚಾದ್ರಿ- ವಳೂರು
- ಕೊಡಚಾದ್ರಿ- ಹಿಡ್ಲುಮನೆ
- ಬಂಡಾಜಿ- ವೊಳಂಬ್ರ
- ನೇತ್ರಾವತಿ- ಚಾರಣ
ಪ್ರವಾಸಿಗರು ಹಾಗೂ ಚಾರಣ ಪ್ರಿಯರು ಅರಣ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.



















