ಪರಪು ಸೇತುವೆ ಬಳಿ ನಿಯಂತ್ರಣ ತಪ್ಪಿ ಸ್ಕೂಟಿ ಸಹಿತ ಹೊಳೆಗೆ ಬಿದ್ದಿರುವ ಶಂಕೆ..!

ಕಾರ್ಕಳ: ಕುಕ್ಕುಂದೂರು ಗ್ರಾಮದ ಪರಪ್ಪು ನಿವಾಸಿ, ನಕ್ರೆ ಘಟಕದ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾಗಿದ್ದ ಸುಬ್ರಹ್ಮಣ್ಯ ಸಾಲ್ಯಾನ್ ಅವರ ಶವ ಪರಪ್ಪು ಸೇತುವೆ ಕೆಳಗೆ ಪತ್ತೆಯಾಗಿದೆ.
ಸಾಮಾಜಿಕ, ಧಾರ್ಮಿಕವಾಗಿ ತೊಡಗಿಸಿಕೊಂಡಿದ್ದ ಸುಬ್ರಹ್ಮಣ್ಯ ಸಾಲಿಯಾನ್ ಅವರ ಮೊಬೈಲ್ ಶನಿವಾರ ಸಂಜೆಯಿಂದ ಸ್ವಿಚ್ ಅಪ್ ಆಗಿದ್ದು ಸಂಬಂಧಿಕರು, ಸ್ನೇಹಿತರು ಹುಡುಕಾಟ ನಡೆಸಿ ನಗರ ಠಾಣೆಗೂ ದೂರು ನೀಡಿದ್ದರು.
ರವಿವಾರ ಘಟನೆ ಬೆಳಕಿಗೆ ಬಂದಿದ್ದು ,ನಿಯಂತ್ರಣ ತಪ್ಪಿ ಸ್ಕೂಟರ್ ಸಮೇತ ಕೆಳಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಸಂಭ್ರಮದ ಖುಷಿಯಲ್ಲಿ ಮಗುವಿಗೆ ಐಸ್ ಕ್ರೀ ತರಲು ಮನೆಯಿಂದ ಹೊರಗಡೆ ಬಂದಿದ್ದಾರೆ ಎನ್ನಲಾಗಿದೆ. ಈ ವೇಳೆ ಅವಘಡ ಸಂಭವಿಸಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.
ಮೃತರು ತಾಯಿ ತಂಗಿ ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.





