
ಚೆನ್ನೈ: ಶನಿವಾರ ನಟ ವಿಜಯ್ ದಳಪತಿ ರ್ಯಾಲಿ ದುರಂತ ಕಣ್ಣಾರೆ ಕಂಡ ಬೆಂಗಳೂರಿನ ಬನಶಂಕರಿ ನಿವಾಸಿ ಮಾಂಗೀಲಾಲ್, ಕಾಲ್ತುಳಿತದಲ್ಲಿ ಸಂಭವಿಸಿದ ಭೀಕರ ದುರಂತವನ್ನು ಕಣ್ಣಾರೆ ಕಂಡಿದ್ದು 10 ವರ್ಷದ ಬಾಲಕಿ ಸಾವನ್ನಪ್ಪಿದ್ದನ್ನು ನೆನೆದು ಭಾವುಕರಾಗಿದ್ದಾರೆ.
ಎರಡು ದಿನಗಳ ಹಿಂದೆ ಮಾಂಗೀಲಾಲ್ ಅವರು ಕರೂರಿಗೆ ತೆರಳಿದ್ದು ಈ ಬಗ್ಗೆ ಮಾತನಾಡಿ, ಕಾಲ್ತುಳಿತದಲ್ಲಿ ಬಾಲಕಿ ಸಾವನ್ನ ಕಣ್ಣಾರೆ ಕಂಡೆ. ಬಾಲಕಿ ಮುಖ ಪೂರ್ತಿ ಊದಿತ್ತು. ಯಾವುದೇ ವ್ಯವಸ್ಥೆ ಸರಿ ಇರಲಿಲ್ಲ. ವಿಜಯ್ ಅವರು ಮಾತಾಡಿದ್ದು ಜನಕ್ಕೆ ಕೇಳುತ್ತಿರಲಿಲ್ಲ. ಜನ ಕೇಳುತ್ತಿಲ್ಲ ಕೇಳುತ್ತಿಲ್ಲ ಎಂದು ಜನ ಕೂಗುತ್ತಿದ್ದರು. ವಿಜಯ್ಗೂ ಜನ ಕೂಗುತ್ತಿರೋದು ಏನು ಎಂದು ಗೊತ್ತಾಗಿಲ್ಲ. ಕ್ಷಣಾರ್ಧದಲ್ಲಿ ಎಲ್ಲವೂ ನಡೆದು ಹೋಯ್ತು ಎಂದಿದ್ದಾರೆ.
ರ್ಯಾಲಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದು ಹೀಗಾಗಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ 39 ಮಂದಿ ಸಾವನ್ನಪ್ಪಿದ್ದು 48 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.






















































