
ದಿನಾಂಕ:20.09.2025 ರಂದು 220/110/11 ಕೆವಿ ಕೇಮಾರ್ ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಕಾರ್ಕಳ ಐಬಿ ಫೀಡರ್ ನಲ್ಲಿ, ಮತ್ತು 110/11ಕೆವಿ ಕಾರ್ಕಳ ಉಪಕೇಂದ್ರದಿಂದ ಹೊರಡುವ 11ಕೆವಿ ಕಾರ್ಕಳ ಟೌನ್ ಫೀಡರ್ ನಲ್ಲಿ, ಎ.ಬಿ.ಕೆಬಲ್ ವ್ಯವಸ್ಥಾ ಸುಧಾರಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 09.00 ಘಂಟೆಯಿಂದ ಅಪರಾಹ್ನ 5.00 ಘಂಟೆಯವರೆಗೆ ವಿದ್ಯುತ್ ನಿಲುಗಡೆಗೊಳಿಸಲಾಗುವುದು.
ಆದ್ದರಿಂದ ಕಾರ್ಕಳ ಬಸ್ ನಿಲ್ದಾಣದಿಂದ ಅನಂತಶಯನ ದೇವಸ್ಥಾನದ ವರೆಗೆ, ವೆಂಕಟರಮಣ ದೇವಸ್ಥಾನದ, ಸಿಟಿ ಮಾರ್ಕೆಟ್ ಮೈನ್ ರೋಡ್, ಮೂರುಮಾರ್ಗ ಮತ್ತು LI.C. ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ. ಗ್ರಾಹಕರು ಇದನ್ನು ಗಮನಿಸಿ ಮ.ವಿ.ಸ.ಕಂ.ನೊಂದಿಗೆ ಸಹಕರಿಸುವಂತೆ ಕೋರಲಾಗಿದೆ.








