33 C
Udupi
Wednesday, April 22, 2026
spot_img
spot_img
HomeBlogಕಾರ್ಕಳ:ಭುವನೇಂದ್ರ ರೆಸಿಡೆನ್ಸಿಯಲ್ ಶಾಲೆಯಲ್ಲಿ ನಡೆದ ಉಡುಪಿ ಜಿಲ್ಲಾ ಸಿ. ಬಿ. ಎಸ್. ಇ ಹಾಗೂ ಐ....

ಕಾರ್ಕಳ:ಭುವನೇಂದ್ರ ರೆಸಿಡೆನ್ಸಿಯಲ್ ಶಾಲೆಯಲ್ಲಿ ನಡೆದ ಉಡುಪಿ ಜಿಲ್ಲಾ ಸಿ. ಬಿ. ಎಸ್. ಇ ಹಾಗೂ ಐ. ಸಿ. ಎಸ್. ಇ ಶಾಲಾ ಒಕ್ಕೂಟದ ಅಂತರ್ ಶಾಲಾ ಮಟ್ಟದ ಗುಡ್ಡಗಾಡು ಓಟ ಸ್ಪರ್ಧೆ ಉದ್ಘಾಟನೆ

“ಆರೋಗ್ಯವಂತ ಜೀವನಕ್ಕೆ ದೈಹಿಕ ಚಟುವಟಿಕೆಯೇ ಮೂಲ ಔಷಧ” -ರಾಧ ಪ್ರಭು

ಮಕ್ಕಳಲ್ಲಿ ದೈಹಿಕ ಚಟುವಟಿಕೆಯ ಕೊರತೆಯಿಂದ ಹಾಗೂ ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ಬೊಜ್ಜು ಮೊದಲಾದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದೆ. ಈ ತೊಂದರೆ ದೂರ ಮಾಡಬೇಕಾದರೆ, ದೈಹಿಕ ಚಟುವಟಿಕೆ ಬೇಕೇ ಬೇಕು. ಹೀಗಾಗಿ ವಿದ್ಯಾರ್ಥಿ ಜೀವನದಲ್ಲಿಯೆ ಕ್ರೀಡೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ದೈಹಿಕ ಚಟುವಟಿಕೆಯೇ ಆರೋಗ್ಯವಂತ ಜೀವನಕ್ಕೆ ಮೂಲ ಮದ್ದು. ಎಂದು ಡಾ.ಎನ್.ಎಸ್. ಏ. . ಎಮ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಇಲ್ಲಿನ ಪ್ರಾಂಶುಪಾಲರಾದ ರಾಧ ಪ್ರಭು ಇವರು ಹೇಳಿದರು.

ದಿನಾಂಕ 17.08.2024 ರಂದು ಶ್ರೀ ಭುವನೇಂದ್ರ ರೆಸಿಡೆನ್ಸಿಯಲ್ ಶಾಲೆ ಕಾರ್ಕಳ ಇಲ್ಲಿ ನಡೆದ ಉಡುಪಿ ಜಿಲ್ಲಾ ಸಿ.ಬಿ.ಎಸ್.ಇ. ಹಾಗೂ ಐ.ಸಿ ಎಸ್.ಇ ಶಾಲಾ ಒಕ್ಕೂಟದ ಅಂತ‌ರ್ ಶಾಲಾ ಮಟ್ಟದ ಗುಡ್ಡಗಾಡು ಓಟ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಯವರಾದ ಡಾ. ಮಂಜುನಾಥ್ ಕೋಟ್ಯಾನ್ ಇವರ ಕ್ರೀಡೆಯ ಮಹತ್ವದ ಬಗ್ಗೆ ವಿವರಿಸಿದರು. ನಂತರ ನಡೆದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅಂತರಾಷ್ಟ್ರೀಯ ಕ್ರೀಡಾ ಪಟುವಾದ ಕು. ಅಕ್ಷತಾ ಪೂಜರಿ ಬೋಳ ಇವರು ಭಾಗವಹಿಸಿದ್ದು ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿಸಿ ಕ್ರೀಡೆಯ ಅನುಭವವನ್ನು ಹಂಚಿಕೊಂಡರು. ಸ್ಪರ್ಧೆಯ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಡಾ.ಎನ್.ಎಸ್.ಏ. ಎಮ್ ಅಂಗ್ಲ ಮಾಧ್ಯಮ ಪ್ರೌಢ ಶಾಲೆ ನಿಟ್ಟೆ ಹಾಗೂ ಅತಿಥೇಯ ತಂಡವಾದ ಶ್ರೀ ಭುವನೇಂದ್ರ ರೆಸಿಡೆನ್ಸಿಯಲ್ ಶಾಲೆ ಕಾರ್ಕಳ ಇದು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.

ಸಂಸ್ಥೆಯ ಸಂಚಾಲಕರಾದ ವೆಂಕಟೇಶ್ ಪ್ರಭು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಂಶುಪಾಲರಾದ ಪ್ರಮೀಳಾ ಕೋಟ್ಯನ್ ಇವರು ಸ್ವಾಗತ ಕಾರ್ಯಕ್ರಮವನ್ನು ನೆರವೇರಿಸಿದರು. ಶಿಕ್ಷಕಿಯರಾದ ಸೌಮ್ಯ ಹಾಗೂ ರಮ್ಯ ಕೆ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ಹೆಗ್ಡೆ, ಗೀತಾ ಶೆಟ್ಟಿಗಾರ್ ಹಾಗೂ ನಿಧಿ ಇವರು ಬಹುಮಾನ ವಿತರಣಾ ಪಟ್ಟಿಯನ್ನು ವಾಚಿಸಿದರು. ಶ್ರೀಮತಿ ಆರತಿ ಆಚಾರ್ ಹಾಗೂ ಮಹಾಲಕ್ಷ್ಮಿ ಇವರು ಧನ್ಯವಾದವಿತ್ತರು. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ನಿಶಾಂತ್ ಅಂಚನ್ ಇವರು ಸಮಗ್ರ ಮಾರ್ಗದರ್ಶಕರಾಗಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page