
ಕಾರ್ಕಳ: ಮಕ್ಕಳನ್ನು ಮೊಬೈಲ್ ಹಾಗೂ ಸ್ಕ್ರೀನ್ ಪ್ರಪಂಚದಿಂದ ದೂರವಿಟ್ಟು ಪ್ರಕೃತಿಯೊಂದಿಗೆ ಸಂಪರ್ಕಿಸಲು “ಕಲಾ ಹೆಜ್ಜೆ 17 – ಫಾರೆಸ್ಟ್ ಟ್ರೈಬ್ ನೈಸರ್ಗಿಕ ಶಿಬಿರ”ವನ್ನು ಘೋಷಿಸಲಾಗಿದೆ. ಈ ವಿಶಿಷ್ಟ 12 ದಿನಗಳ ಶಿಬಿರವು ಏಪ್ರಿಲ್ 8 ರಿಂದ 19, 2026 ರವರೆಗೆ, ಕಾರ್ಕಳದ ಸುಂದರವಾದ ಕರಿಯಕಲ್ಲು ಅರಣ್ಯ ಪ್ರದೇಶದಲ್ಲಿ ನಡೆಯಲಿದೆ.
ಸಾಮಾನ್ಯವಾಗಿ ನಾಲ್ಕು ಗೋಡೆಗಳೊಳಗೆ ನಡೆಯುವ ಶಿಬಿರಗಳಿಗಿಂತ ವಿಭಿನ್ನವಾಗಿ, ಈ ಶಿಬಿರವು ಸಂಪೂರ್ಣವಾಗಿ ಪ್ರಕೃತಿಯ ಮಧ್ಯದಲ್ಲಿ ನಡೆಯುವ ವಿಶೇಷ ಅನುಭವವನ್ನು ನೀಡುತ್ತದೆ. “Leave the Screen… Enter the Green” ಎಂಬ ತತ್ವದಡಿ ಮಕ್ಕಳನ್ನು ಪ್ರಕೃತಿ, ಅರಣ್ಯ, ನದಿ ಹಾಗೂ ಗ್ರಾಮೀಣ ಜೀವನದತ್ತ ಕರೆತರುವ ಉದ್ದೇಶ ಹೊಂದಿದೆ.
ಈ ಶಿಬಿರದ ವಿಶೇಷತೆ ಎಂದರೆ “ಟ್ರೈಬ್ ಕಾನ್ಸೆಪ್ಟ್”. ಮಕ್ಕಳು ವಿಭಿನ್ನ ಗುಂಪುಗಳಾಗಿ (ಟ್ರೈಬ್ಸ್) ವಿಭಜನೆಯಾಗಿ, ತಂಡ ಆಧಾರಿತ ಚಟುವಟಿಕೆಗಳು, ಸವಾಲುಗಳು ಮತ್ತು ಮಿಷನ್ಗಳಲ್ಲಿ ಭಾಗವಹಿಸಲಿದ್ದಾರೆ. ಇದರಿಂದ ಮಕ್ಕಳಲ್ಲಿ ನಾಯಕತ್ವ, ಸಹಕಾರ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ.
🏕 ಶಿಬಿರದ ವಿಶೇಷತೆಗಳು:
ಅರಣ್ಯ ಚಟುವಟಿಕೆಗಳು ಮತ್ತು ನೈಸರ್ಗಿಕ ಕಾರ್ಯಗಳು
ಕ್ರಿಯೇಟಿವ್ ಫಾರೆಸ್ಟ್ ಕ್ರಾಫ್ಟ್
ಟ್ರೈಬ್ ಟ್ಯಾಟೂ ಮತ್ತು ಫೇಸ್ ಪೇಂಟಿಂಗ್
ಹೋಳಿ ಹಬ್ಬ ಆಚರಣೆ
ಗ್ರಾಮೀಣ ಆಟಗಳು ಮತ್ತು 90ರ ದಶಕದ ಆಟಗಳು
ಫಾರೆಸ್ಟ್ ಯೋಗ ಮತ್ತು ಜೀವನ ಕೌಶಲ್ಯಗಳು
ಮನರಂಜನಾ ಅರಣ್ಯ ಆಟಗಳು
🌿 ಸಾಹಸ ಮತ್ತು ಅನ್ವೇಷಣೆ:
ಅರಣ್ಯ ಸುತ್ತಾಟ ಮತ್ತು ಮರ ಹತ್ತುವುದು
ನೈಸರ್ಗಿಕ ಬ್ಲೈಂಡ್ ವಾಕ್
ನದಿ ಕಲ್ಲುಗಳ ಮೇಲೆ ನಡೆದು ದಾಟುವುದು
ನದಿ ಕಥೆ ಹಾಗೂ ಬ್ಯಾಲೆನ್ಸ್ ಚಟುವಟಿಕೆ
ಗ್ರಾಮೀಣ ಜೀವನ ಅನುಭವ ಮತ್ತು ನೆನೆದ ಹೊಲದಲ್ಲಿ ಆಟ
ಜಲಪಾತ ಟ್ರೆಕ್ಕಿಂಗ್
ಒಂದು ದಿನದ ಅರಣ್ಯ ಮತ್ತು ನದಿ ಪ್ರವಾಸ
ಈ ಶಿಬಿರವು 6 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಹೊಸ ಅನುಭವ, ಸಾಹಸ ಮತ್ತು ಕಲಿಕೆಯನ್ನು ನೀಡುವ ಉದ್ದೇಶ ಹೊಂದಿದೆ.
ಶಿಬಿರದ ಸಮಯ ಬೆಳಿಗ್ಗೆ 8:45 ರಿಂದ ಸಂಜೆ 5:00ರವರೆಗೆ ಇರಲಿದೆ. ಅನಂತಶಯನ ದೇವಸ್ಥಾನದ ಹಿಂಭಾಗದಿಂದ ಪಿಕಪ್ ಮತ್ತು ಡ್ರಾಪ್ ವ್ಯವಸ್ಥೆ ಇರುತ್ತದೆ.
📢 ಪ್ರವೇಶಗಳು ಈಗ ತೆರೆಯಲಾಗಿದೆ – ಸೀಮಿತ ಸೀಟುಗಳು ಮಾತ್ರ
ನೋಂದಣಿ ಗೂಗಲ್ ಫಾರ್ಮ್ ಮೂಲಕ ನಡೆಯಲಿದೆ (ಶೀಘ್ರದಲ್ಲೇ ಬಿಡುಗಡೆ)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 9886447055 / 9535450239






