
ಕಾರ್ಕಳ : ಇಂದು ಸೂರಜ್ ಶೆಟ್ಟಿ ನಕ್ರೆ ಇವರ ಸಂಜನಾ ಆರ್ಕೆಡ್ ಕಾರ್ಕಳ ಇಲ್ಲಿ ನಡೆಸುತ್ತಿದ್ದ ಕ್ರಿಯೇಟಿವ್ ಅಸೋಸಿಯೇಟ್ಸ್ ಶಾಖೆಯು ನೂತನವಾಗಿ ಕಾರ್ಕಳ ಜೋಡುರಸ್ತೆಯ ಬಿ.ಟಿ.ಕೆ ಪೆಟ್ರೋಲ್ ಪಂಪ್ ಎದುರುಗಡೆ ಇರುವ ಅಧಿದನ್ ಕಟ್ಟಡದಲ್ಲಿ ಆರ್ನಿ ಇಂಜಿನಿಯರಿಂಗ್ ಮತ್ತು ಕಂಟ್ರಾಕ್ಟರ್ಸ್ ಎಂಬ ಹೆಸರಿನೊಂದಿಗೆ ಶುಭಾರಂಭಗೊಂಡಿದೆ.
ಹೊಸ ಶಾಖೆಯನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕರಾದ ಉದಯ್ ಕುಮಾರ್ ಶೆಟ್ಟಿ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸೂರಜ್ ಶೆಟ್ಟಿ ನಕ್ರೆ ಅವರ ಹಿತೈಷಿ ಬಳಗ ಮತ್ತು ಸ್ಥಳೀಯ ಗಣ್ಯರು ಉಪಸ್ಥಿತರಿದ್ದು, ಸಂಸ್ಥೆಯ ಯಶಸ್ಸಿಗೆ ಶುಭ ಕೋರಿದರು.