
ಕಾರ್ಕಳ: ಆಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀಬಾಲ ರಾಮನ ಮಂದಿರಕ್ಕೆ ಒಂದು ವರುಷ ಪೂರ್ತಿಗೊಂಡ ಈ ಶುಭ ದಿನದಂದು ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ ಮಕ್ಕಳು ಶ್ರೀ ರಾಮ ನಾಮ ಜಪವನ್ನು ನಿರಂತರವಾಗಿ ಸುಮಾರು ಅರ್ಧ ತಾಸುಗಳವರೆಗೆ ಜಪಿಸಿ ಸಮಗ್ರ ಶಾಲಾ ವಾತಾವರಣವನ್ನು ಸಕಾರಾತ್ಮಕವಾಗಿಸಿದರು. ನಮ್ಮ ಹಿಂದೂ ಸಂಪ್ರದಾಯದಂತೆ ಶ್ರೀರಾಮನ ಹೆಸರು ಬ್ರಹ್ಮಾಂಡದಲ್ಲಿ ಅತ್ಯಂತ ಬಲವಾದ ಮತ್ತು ಸಕರಾತ್ಮಕ ಕಂಪನಗಳಿಂದ ಕೂಡಿದ್ದು,ರಾಮನ ನಾಮಗಳನ್ನು ಜಪಿಸಿದರೆ ನಮ್ಮಲ್ಲಿ ಸಕಾರಾತ್ಮಕ ಬದಲಾವಣೆಗಳು ಆಂತರಿಕವಾಗಿ ಉಂಟಾಗುವುದರೊಂದಿಗೆ ಮಾನಸಿಕವಾಗಿ ನಿರಾಳತೆ ಹಾಗೂ ನೆಮ್ಮದಿ ದೊರೆಯುವುದು.






























































































































