27.6 C
Udupi
Monday, December 22, 2025
spot_img
spot_img
HomeBlogಕಾರ್ಕಳ: ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ

ಕಾರ್ಕಳ: ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ

ಮಾಳ: ಕಾರ್ಕಳ ತಾಲೂಕಿನ ಮಾಳ, ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವವು ಡಿಸೆಂಬರ್ 26 ರಿಂದ 28 ರವರೆಗೆ ಶಾಲಾ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಮೂರು ದಿನಗಳ ಈ ಮಹೋತ್ಸವವನ್ನು ಶ್ರೀ ಗುರುಕುಲ ವಿದ್ಯಾವರ್ಧಕ ಸಂಘದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ, ಕಾರ್ಯದರ್ಶಿ, ಆಡಳಿತ ಮಂಡಳಿ ಸದಸ್ಯರು ಹಾಗೂ ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಆಯೋಜಿಸಲಾಗಿದೆ.

ಡಿಸೆಂಬರ್ 26ರಂದು ಧಾರ್ಮಿಕ ಪೂಜೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 9:00ಗೆ ‘ಜೋಡು ಜೀಟಿಗೆ’ ಎಂಬ ತುಳು ಜನಪದ ಸಿನಿ ನಾಟಕ ನಡೆಯಲಿದೆ.

ಡಿಸೆಂಬರ್ 27ರಂದು ಪ್ರಮುಖ ಸಭಾ ಕಾರ್ಯಕ್ರಮ, ಗಣ್ಯರ ಉಪನ್ಯಾಸಗಳು ಹಾಗೂ ಸನ್ಮಾನ ಸಮಾರಂಭಗಳು ನಡೆಯಲಿದ್ದು ರಾತ್ರಿ 9:00 ಯಿಂದ ‘ಮಹಿಶರ್ಮರ್ದಿನಿ’ ಎಂಬ ಯಕ್ಷಗಾನ ನಡೆಯಲಿದೆ.

ಡಿಸೆಂಬರ್ 28ರಂದು ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ರಾತ್ರಿ 9:00ಗೆ ಜೀ ಕನ್ನಡ ಸರಿಗಮಪ ಖ್ಯಾತಿಯ ಕು| ಪ್ರಜ್ಞ ಮರಾಠೆ ಮತ್ತು ಶ್ರೀ ಯಶವಂತ ಎಂ.ಜಿ ಹಾಗೂ ಗುರುಕುಲ ಶಾಲಾ ಹಳೆ ವಿದ್ಯಾರ್ಥಿಗಳಿಂದ ‘ಸಂಗೀತ ರಸಮಂಜರಿ’ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10:30 ರಿಂದ ಶಾಲಾ ಹಳೆ ವಿದ್ಯಾರ್ಥಿಗಳಿಂದ ‘ಬಾಕಿಲ್ ದೆಪ್ಪುಲೆ’ ಎಂಬ ತುಳು ನಾಟಕದೊಂದಿಗೆ ಅಮೃತ ಮಹೋತ್ಸವಕ್ಕೆ ತೆರೆ ಬೀಳಲಿದೆ.

ರಾಜ್ಯ ಹಾಗೂ ಹೊರರಾಜ್ಯಗಳಿಂದ ಗಣ್ಯರು, ಶಿಕ್ಷಣ ತಜ್ಞರು, ಸಂಘದ ಹಿತೈಷಿಗಳು, ಹಳೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಲಿದ್ದು ಈ ಅಮೃತ ಮಹೋತ್ಸವವು ಸಂಸ್ಥೆಯ 75 ವರ್ಷಗಳ ಶೈಕ್ಷಣಿಕ ಸೇವೆ ಮತ್ತು ಸಾಮಾಜಿಕ ಕೊಡುಗೆಯನ್ನು ಸ್ಮರಿಸುವ ಐತಿಹಾಸಿಕ ಕಾರ್ಯಕ್ರಮವಾಗಿ ರೂಪುಗೊಳ್ಳಲಿದೆ.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page