
ಹಿಂದವೀ ಸ್ವರಾಜ್ಯದ ಕನಸು ಕಂಡ ವೀರ ಶಿವಾಜಿಯ ತಾಯಿ ರಾಜಮಾತೆ ಜೀಜಾಬಾಯಿ ಅವರ ಜನ್ಮದಿನಾಚರಣೆಯು ಕಾರ್ಕಳ ತಾಲೂಕು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ನ ವತಿಯಿಂದ ಕಾಳಿಕಾಂಬ ದೇವಸ್ಥಾನದ ಬಳಿ ಇರುವ ಕವಡೆ ಮನೆತನದ ಸ್ವಗ್ರಹದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ನ ಜಿಲ್ಲಾ ಅಧ್ಯಕ್ಷ ಪ್ರಕಾಶ್ ರಾವ್ ಕವಡೆ, ಕಾರ್ಯದರ್ಶಿ ಸಂತೋಷ್ ರಾವ್, ಹರೀಶ್ ರಾವ್ ಅಸ್ವಲ್, ಪ್ರಶಾಂತ್ ರಾವ್ ಕವಡೆ, ದಿನೇಶ್ ರಾವ್, ನಾಗೇಶ್ ರಾವ್, ಸುಧೀರ್ ರಾವ್, ಸಂಜೀವ ರಾವ್, ವೀರೇಂದ್ರ ರಾವ್, ರಾಹುಲ್ ರಾವ್, ಗಿರೀಶ್ ರಾವ್, ಕಾರ್ತಿಕ್ ರಾವ್, ಆದಿತ್ಯ ರಾವ್, ಮತ್ತು ಮಹಿಳಾ ವಿಭಾಗದವರು ಉಪಸ್ಥಿತರಿದ್ದರು.



















