
ಕಾರ್ಕಳ:ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇಶ ಮತ್ತು ಯೋಧರ ಒಳಿತಿಗಾಗಿ ವಿಶೇಷ ಪೂಜೆ ಹಾಗೂ ಸಾಮೂಹಿಕ ಪ್ರಾರ್ಥನೆ
ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ಸುತ್ತೋಲೆಯಂತೆ ದಿನಾಂಕ 10.05.2025ನೇ ಶನಿವಾರ ದೇವಸ್ಥಾನದಲ್ಲಿ ದೇಶಕ್ಕೆ ಮತ್ತು ದೇಶ ಕಾಯುವ ಯೋಧರಿಗೆ ಒಳಿತಾಗಲಿ ಎಂದು ಸಾಮೂಹಿಕ ಪ್ರಾರ್ಥನೆಯನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ತಾರಾನಾಥ್ ಕೋಟ್ಯಾನ್ ಸೂರಾಲು ಇವರ ನೇತೃತ್ವದಲ್ಲಿ ನಡೆಸಲಾಯಿತು.
ಆ ಪ್ರಯುಕ್ತ ಸಾಯಂಕಾಲ 6:00 ಗಂಟೆಯಿಂದ ಶಿವ ಶಕ್ತಿ ಭಜನಾ ಮಂಡಳಿ ಮಿಯ್ಯಾರು ಹಾಗೂ ಇತರ ತಂಡದ ಸದಸ್ಯರ ಕೂಡುವಿಕೆಯೊಂದಿಗೆ ಭಜನಾ ಕಾರ್ಯಕ್ರಮ ನಡೆಯಿತು,7:30 ಗಂಟೆಗೆ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವರಿಗೆ ಮಹಾಪೂಜೆ ಸಲ್ಲಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಬೋರ್ಕಟ್ಟೆ ಗಣಪತಿ ಹೆಗ್ಡೆ, ಕಾರ್ಯದರ್ಶಿ ಕಿಶೋರ್ ಶೆಟ್ಟಿ ಮಂಗಳೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾದ ಸುಧಾಕರ್ ಶೆಟ್ಟಿ ಮುಡಾರು, ನಿಕಟಪೂರ್ವ ಆಡಳಿತ ಮುಕ್ತೇಸರರಾದ ಸತ್ಯೇಂದ್ರ ನಾಯಕ್ ,ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಮಾಧವಕಾಮತ್, ರಮಾಕಾಂತ್ ಶೆಟ್ಟಿ,ಉಮೇಶ್ ಕಾಡಂಬಳ ಹಾಗೂ ವಸಂತ ದೇವಾಡಿಗ, ಕರುಣಾಕರ ಶೆಟ್ಟಿ, ಕೃಷ್ಣ ಶೆಟ್ಟಿ, ಪ್ರಶಾಂತ್ ಪೂಜಾರಿ, ಗಣೇಶ್ ಕುಮಾರ್, ಉಮೇಶ್ ಕುಲಾಲ್, ಶಶಿಕಲ ಭಂಡಾರಿ, ವಸಂತಿ ಕಾಡಂಬಳ, ರಮೇಶ್ ವಾಗ್ಳೆ,ರಾಜೇಶ್ ದೇವಾಡಿಗ, ಮೋಹನ್ ನಾಯಕ್,ಹಾಗೂ ಊರಿನ ಪ್ರಮುಖರು,ಭಕ್ತಾದಿಗಳು ಉಪಸ್ಥಿತರಿದ್ದರು,
ಕೃಷ್ಣಮೂರ್ತಿ ಇರ್ವತ್ರಾಯ ಮತ್ತು ಪ್ರಸನ್ನ ಭಟ್ ಪೂಜಾ ಕಾರ್ಯ ನೆರವೇರಿಸಿದರು, ಶ್ರೀನಿವಾಸ್ ಭಟ್ ಕೊಂಡೆಜಾಲು ಪ್ರಾರ್ಥನೆ ಸಲ್ಲಿಸಿದರು, ನಂತರ ರಮಾಕಾಂತ ಶೆಟ್ಟಿ ಕರ್ಮಾರ್ ಕಟ್ಟೆ, ಅಮರನಾಥ ಭಂಡಾರಿ ನೆಲ್ಲಿಗುಡ್ಡೆ, ಪ್ರಸಾದ್ ಶೆಟ್ಟಿ ಇಕ್ಕಿನೊಟ್ಟು, ಪ್ರಶಾಂತ ಬಜಗೋಳಿ, ಸತೀಶ್ ಕಾತ್ಯಾಯಿನಿ, ಸಂದೇಶ್ ಶೆಟ್ಟಿ ಕೊಟ್ರಾಡಿ, ಉಮೇಶ್ ಕಾಡಂಬಳ ಇವರ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು.
ಸಹಕರಿಸಿದ ಸರ್ವರಿಗೂ ವ್ಯವಸ್ಥಾಪಾ ಸಮಿತಿಯ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿದರು




















