
ಉಡುಪಿ: ಡಿಸೆಂಬರ್ 28ರಂದು ಜಿಲ್ಲೆಯ ಕಾರ್ಕಳ ತಾಲೂಕಿನ ನೀರೆ ಸಮೀಪದಲ್ಲಿ ಅಕ್ರಮವಾಗಿ ಕಾರಿನಲ್ಲಿ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಪ್ರೇಮನಾಥ ಯಾನೆ ಪ್ರೇಮ್, ರೇವುನಾಥ, ಶೈಲೇಶ, ಪ್ರಜ್ವಲ್ ಎಂಬವರು ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗಲೇ ಬಂಧಿಸಿದ್ದಾರೆ.
2 ಲಕ್ಷ ರೂ ಮೌಲ್ಯದ 37.27 ಗ್ರಾಂ ಎಂಡಿಎಂಎ, 87,500 ರೂ. ಮೌಲ್ಯದ 1.112 ಕಿಲೋ ಗಾಂಜಾ, 41,000 ಮೌಲ್ಯದ 5 ಮೊಬೈಲ್, ಎರಡು ಬ್ಯಾಗ್, ಕೈ ಕೊಡಲಿ, ಚೂರಿ, 7,130 ರೂ. ನಗದು ಒಂದು ಕಾರು ಮತ್ತು ಒಂದು ಬೈಕ್ ವಶಪಡಿಸಿಕೊಂಡಿದ್ದು ಇವುಗಳ ಒಟ್ಟು ಮೌಲ್ಯ 7,86,330 ಎಂದು ಅಂದಾಜು ಮಾಡಲಾಗಿದೆ.




