
ಕಾರ್ಕಳ: ತಾಲೂಕಿನ ಕುಂಟಲ್ಪಾಡಿ ಪ್ರದೇಶದಲ್ಲಿ ಮಹಮ್ಮದ್ ಅಸ್ಲಾಂ ಅವರಿಗೆ ಸೇರಿದ ಮನೆಯ ಬಾಗಿಲು ಒಡೆದು ಮದ್ದು ಗುಂಡುಗಳನ್ನು ಕಳ್ಳತನ ಮಾಡಿದ ಘಟನೆ ವರದಿಯಾಗಿದೆ.
ಡಿ.18ರಿಂದ ಜ.09ರ ನಡುವೆ ಕಳ್ಳರು ಮನೆಯ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿ, ಕಬಾಟಿನಲ್ಲಿ ಇಡಲಾಗಿದ್ದ ರೂ.1,200 ಮೌಲ್ಯದ 49 ಸಜೀವ ಮದ್ದು ಗುಂಡುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



















