ಕಾರ್ಕಳದ ಹಿಂದೂ ಮುಖಂಡರು ಬಿಜೆಪಿಯ ಹಿರಿಯ ನಾಯಕರು ಶಾಸಕ ಸುನಿಲ್ ಕುಮಾರ್ ಗೆ ನೇರಾ ನೇರ ಸವಾಲೆಸೆಯುತ್ತಿರಲು ಕಾರಣವೇನು..?
ಪ್ರದೀಪ್ ಶೆಟ್ಟಿ ನಲ್ಲೂರು,
ಉಪಾಧ್ಯಕ್ಷರು ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ಪ್ರಶ್ನೆ

ನಕಲಿ ಪರಶುರಾಮ ಮೂರ್ತಿಯ ನಿರ್ಮಾಣ ಮಾಡಿದ ಕೃಷ್ಣ ನಾಯಕ್ ರವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತಿದ್ದಂತೆ ಹಿಂದೂತ್ವದ ಹೆಸರು ಹೇಳಿಕೊಂಡು ಅಧಿಕಾರದ ಬಂದಂತಹ ಶಾಸಕರಾದ ವಿ ಸುನಿಲ್ ಕುಮಾರ್ರವರು ಅತ್ತ ನಕಲಿ ಪರಶುರಾಮ ನಿರ್ಮಿಸಿದವರನ್ನು ರಕ್ಷಿಸಲು ಆಗದೆ ಇತ್ತ ಬಿಜೆಪಿ ಕಾರ್ಯಕರ್ತರಿಗೆ ಉತ್ತರಿಸಲು ಆಗದೆ ಪೇಚಾಟಕ್ಕೆ ಸಿಲುಕಿ ಹಿಂದೂ ಸಂಘಟನೆ ಹಾಗೂ ಕಾರ್ಕಳ ಬಿಜೆಪಿ ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗುವಂತೆ ಮಾಡಿತೆ ಈ ಪರಶುರಾಮ ಥೀಮ್ ಪಾರ್ಕ್…?? ಎಂದು ಕಾರ್ಕಳ ಪರಶುರಾಮ ಟಿಮ್ ಪಾರ್ಕ್ ಹಿತರಕ್ಷಣ ಸಮಿತಿ ಉಪಾಧ್ಯಕ್ಷರಾದ ಪ್ರದೀಪ್ ಶೆಟ್ಟಿ ಪ್ರಶ್ನಿಸಿದ್ದಾರೆ.
ಒಂದೆಡೆ ಶಾಸಕರ ಮೇಲಿನ ಮುನಿಸಿನಿಂದ ಪಕ್ಷ ಬಿಟ್ಟು ಹೊರಬಂದವರು ಪರಶುರಾಮ ವಿವಾದವನ್ನು ಎತ್ತಿಕೊಂಡು ಸತ್ಯಾಗ್ರಹ ಮಾಡುತ್ತಿದ್ದರು ಆ ನಂತರ ಹೋರಾಟಗಾರರ ಮೇಲೆ ಮೊಕದ್ದಮೆ ಹಾಕಿ ಹೋರಾಟಗಾರರನ್ನು ಈ ಹಿಂದಿನ ಇತರೆ ಪ್ರಕರಣಗಳಂತೆ ಹಳ್ಳಹಿಡಿಸುವ ಕೆಲಸ ಮಾಡಲಾಯಿತು. ಆನಂತರದಲ್ಲಿ ಅಸ್ಥಿತ್ವಕ್ಕೆ ಬಂದ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ(ರಿ) ಈ ಸಂಬಂದಿತ ಹತ್ತು ಹಲವಾರು ದಾಖಲೆಗಳನ್ನು ಕಲೆಹಾಕಿ ಸಂಬಂದಪಟ್ಟ ಸೂಕ್ತ ಇಲಾಖೆಗಳಿಗೆ ದೂರು ನೀಡಿ ಕಾನೂನಾತ್ಮಕ ಹೋರಾಟದಿಂದ ಮತ್ತೆ ಈ ಪ್ರಕರಣವನ್ನು ಜೀವಂತಗೊಳಿಸಿ ಮುನ್ನಲೆಗೆ ತಂದು ಶಾಸಕರು ಇಕ್ಕಟ್ಟಿಗೆ ಸಿಲುಕವ ಲಕ್ಷಣಗಳು ಕಂಡು ಬರುತ್ತಿದ್ದು ಇನ್ನೊಂದೆಡೆ ಬಿಜೆಪಿಯ ಹಿರಿಯ ಮುಖಂಡರಾದ ರವೀಂದ್ರ ಶೆಟ್ಟಿಯವರು ಮಾನ್ಯ ಸುನಿಲ್ ಕುಮಾರ್ ರವರ ಹೆಸರು ಸಂಭೋದಿಸುವಾಗ ಶಾಸಕ ಎನ್ನುವ ಪದವನ್ನು ಬಳಸದೆ ಬಹಳ ಖಾರವಾಗಿ ಸುನಿಲ್ ಕುಮಾರ್ ಎಂದೆನ್ನುತ್ತಾ ಮುಂದುವರಿದು ಈ ವಿವಾದವನ್ನು ಬಗೆಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕವಾಗಿ ನೀಡುತ್ತಿರುವುದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಶಾಸಕ ಸುನಿಲ್ ಕುಮಾರ್ ರವರ ವಿರುದ್ದ ಬಹುದೊಡ್ಡ ಶೀತಲ ಸಮರ ಸಾರಿರುವುದು ಈಗ ಜಗಜ್ಜಾಹಿರಾಗಿದೆ ಎಂದರೆ ತಪ್ಪಾಗಲಾರದು.
ಇದೆಲ್ಲದರ ನಡುವೆ ತರಾತುರಿಯಲ್ಲಿ ನಕಲಿ ಮೂರ್ತಿ ಪ್ರತಿಷ್ಟಾಪನೆ ಮಾಡಿ ಅಂದಿನ ಮಾನ್ಯ ಮುಖ್ಯಮಂತ್ರಿಗಳು (ಬಸವರಾಜ್ ಬೊಮ್ಮಾಯಿ) ಉಧ್ಘಾಟಿಸಿದರಿಂದ ಇಡೀ ಬಿಜೆಪಿ ಪಕ್ಷವೇ ರಾಜ್ಯಾದ್ಯಂತ ಪೇಚೆಗೆ ಸಿಲುಕುವ ಪರಿಸ್ಥಿತಿಯನ್ನು ನಿರ್ಮಿಸಿಕೊಂಡ ಶಾಸಕ ಸುನಿಲ್ ಕುಮಾರ್ ರವರನ್ನು ತಮ್ಮದೇ ಪಕ್ಷದ ನಾಯಕರು ಕಡೆಗಣಿಸುತ್ತಿರುವುದು ಹಾಗೂ ಸಾರ್ವಜನಿಕ ವಲಯದಲ್ಲಿ ಮಾಧ್ಯಮಗಳಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಕಾರ್ಕಳ ಪರಶುರಾಮ ಸಮಿತಿಯ ಹೋರಾಟಕ್ಕೆ ಆನೆ ಬಲ ಬಂದಂತಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





