29.1 C
Udupi
Sunday, April 26, 2026
spot_img
spot_img
HomeBlogಕಾರ್ಕಳ: ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿ ಪಲಾಯನ ಮಾಡಿದ್ದ ಕಾರು ಪತ್ತೆ

ಕಾರ್ಕಳ: ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿ ಪಲಾಯನ ಮಾಡಿದ್ದ ಕಾರು ಪತ್ತೆ

ಕಾರ್ಕಳ: ಇಲ್ಲಿನ ತಾಲೂಕು ಕಚೇರಿ ಜಂಕ್ಷನ್ ಬಳಿ ಬೈಪಾಸ್ ರಸ್ತೆಯಲ್ಲಿರುವ ಎಂ ಆರ್ ಪಿ ಎಲ್ ಪೆಟ್ರೋಲ್ ಬಂಕ್ ನಲ್ಲಿ ಕಳೆದ ಆಗಸ್ಟ್ 29ರಂದು ನಸುಕಿನ ಹೊತ್ತು 2:50 ಗಂಟೆ ಗೆ ಕಾರಿಗೆ ಟ್ಯಾಂಕ್ ತುಂಬಾ ಪೆಟ್ರೋಲ್ ತುಂಬಿಸಿ ಹಣ ಕೊಡದೆ ಪರಾರಿಯಾಗಿದ್ದ ವ್ಯಕ್ತಿಯನ್ನು ಕಾರ್ಕಳ ನಗರ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕೆವಿ 20 ಎಂಇ 8121 ನಂಬರ್ ನ ಮಹೇಂದ್ರ xuv 300 ಕಾರಿಗೆ 4,253.88 ಪೆಟ್ರೋಲ್ ಹಾಕಿಸಿಕೊಂಡು ಚಾಲಕ ಬಂಕನ ಸಿಬ್ಬಂದಿ ಆಕಾಶ ಎಂಬವರಿಗೆ ಯುಪಿಐ ಸ್ಕ್ಯಾನರ್ ತರುವಂತೆ ಹೇಳಿದ್ದಾನೆ ಸಿಬ್ಬಂದಿ ಯುಪಿಐ ಸ್ಕ್ಯಾನರ್ ತರಲು ಒಳಗೆ ಹೋದಾಗ ಚಾಲಕ ಪೆಟ್ರೋಲ್ ಹಾಕಿದ ಹಣ ನೀಡದೆ ಮೋಸ ಮಾಡಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ.

ಕಾರು ಪೆಟ್ರೋಲ್ ಬಂಕ್ ಎದುರುಗಡೆಯ ರಸ್ತೆಯಾಗಿ ಸ್ವಲ್ಪ ಮುಂದಕ್ಕೆ ಹೋಗಿದ್ದು ಕೆಲವೇ ಕ್ಷಣದಲ್ಲಿ ಮತ್ತೆ ಹಿಂದಿರುಗಿದೆ. ಆ ವೇಳೆಗೆ ನಾಯಿಗಳು ಕಾರನ್ನು ಬೆನ್ನಟ್ಟಿಕೊಂಡು ಬೊಗಳಿರುವ ದೃಶ್ಯ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಮಾತ್ರವಲ್ಲದೆ ಕುಕ್ಕುಂದೂರು ಗಣಿತ ನಗರದ ಮೂಲಕವಾಗಿ ಹಿರಿಯಡ್ಕ ಮಾರ್ಗವಾಗಿ ಹಾದು ಹೋದ ಕಾರಿನ ದೃಶ್ಯ ಎರಡು ಕಡೆ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು ಈ ಕಾರು ಬಂಟೆಕಲ್ಲಿನ ವ್ಯಕ್ತಿಯೊಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page