
ಕಾರ್ಕಳ: ಬೈಲೂರಿನ ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕಿನ ಮೂರ್ತಿ ವಿಚಾರವಾಗಿ, ಕೃಷ್ಣ ಶೆಟ್ಟಿ ರವರು ನೀಡಿದ ದೂರಿನ ಆಧಾರದ ಮೇಲೆ ಶಿಲ್ಪಿ ಕೃಷ್ಣನಾಯಕ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಅದನ್ನು ವಜಾ ಗೊಳಿಸುವಂತೆ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ವಿಚಾರಣೆಯಲ್ಲಿ, ಹೈಕೋರ್ಟ್ ಪ್ರಕರಣವನ್ನು ವಜಾಗೊಳಿಸಲು ನಿರಾಕರಿಸಿದೆ.
ಆರೋಪಿಯ ಪರ ಹಿರಿಯ ನ್ಯಾಯವಾದಿ ಅರುಣ್ ಶಾಮ್, ನಿರ್ಮಿತಿ ಕೇಂದ್ರದ ಪರ ದಿನೇಶ್ ಹೆಗ್ಡೆ ಉಳಿಪಾಡಿ ಹಾಗೂ ಕೃಷ್ಣ ಶೆಟ್ಟಿ ಅವರ ಪರ ವಿ.ಕೆ. ಶ್ರೀಕಾಂತ್ ವಾದ ಮಂಡಿಸಿದ್ದು ಸರಕಾರದ ಪರವಾಗಿ ಬಿ ಎನ್ ಜಗದೀಶ್ ವಾದಿಸಿದ್ದಾರೆ.






















































