
ಕಾರ್ಕಳ ಪಡುಬಿದ್ರಿ ಕಂಚಿನಡ್ಕ ಟೋಲ್ ವಿರೋದಿ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ಪ್ರತಿಭಟನೆಯ ದಿನವೇ ಟೋಲ್ ರದ್ದತಿಯ ಶುಭ ಸುದ್ದಿ ಸಿಗಲಿದೆ ಎಂಬ ಭರವಸೆ ಶುಭದ ರಾವ್ ಕಾರ್ಕಳ ಪಡುಬಿದ್ರೆ ಕಂಚಿನಡ್ಕ ಟೋಲ್ ವಿರೋದಿಸಿ ಶನಿವಾರ ಸುಹಾಸ್ ಹೆಗ್ಡೆಯವರ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಗೆ ಕಾಂಗ್ರೇಸ್ ಸಂಪೂರ್ಣ ಬೆಂಬಲ ನೀಡುತ್ತಿದ್ದು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಸರಕಾರ ಈ ಬಗ್ಗೆ ಜನಪರವಾದ ನಿರ್ಣಯವನ್ನು ಕೈಗೊಂಡು ಆದೇಶವನ್ನು ಹೊರಡಿಸಲಿದೆ ಎನ್ನುವ ಸಂಪೂರ್ಣ ಭರವಸೆ ಇದೆ ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೇಸ್ ಮತ್ತು ಕಾಪು ಬ್ಲಾಕ್ ಕಾಂಗ್ರೇಸ್ ಆಶ್ರಯದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮತ್ತು ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿಯವರ ಮುಂದಾಳತ್ವದಲ್ಲಿ ಬುಧವಾರ ನಡೆದ ಪ್ರತಿಭಟನೆ ಯಶಸ್ವಿಯಾಗಿದೆ. ಇದರ ಪರಿಣಾಮ ರಾಜ್ಯ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ, ಅದರ ಫಲವಾಗಿ ಟೋಲ್ ರದ್ದತಿಯ ಆದೇಶವನ್ನು ತಕ್ಷಣ ಹೊರಡಿಸಿದರೆ ಪ್ರತಿಭಟನೆಯ ದಿನವೇ ವಿಜಯೋತ್ಸವ ಆಚರಿಸುವಂತಾಗಲಿ ಎಂಬುದು ನಮ್ಮ ಆಶಯ ಎಂದು ಅವರು ತಿಳಿಸಿದ್ದಾರೆ.













