
ಕಾರ್ಕಳ: ಮಾರ್ಚ್ 7 ನಾಳೆ ತಾಲೂಕಿನ ವಿಶ್ವ ಹಿಂದೂ ಪರಿಷತ್ ಬಜರಂಗದಳ ವೀರ ಮಾರುತಿ ಶಾಖೆ ಹಾಗೂ ಸಾರ್ವಜನಿಕ ಶನಿ ಪೂಜಾ ಸಮಿತಿ ಕರಿಯ ಕಲ್ಲುವತಿಯಿಂದ ಶ್ರೀ ಶನೀಶ್ವರ ಕ್ಷೇತ್ರದಲ್ಲಿ 24ನೇ ವರ್ಷದ ಸಾರ್ವಜನಿಕ ಶ್ರೀ ಶನಿಪೂಜೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮಾರ್ಚ್ 7ರಂದು ಸಂಜೆ 5 ಗಂಟೆಗೆ ಪೂಜೆ ಆರಂಭವಾಗಲಿದ್ದು, ಸಂಜೆ 7.30ಕ್ಕೆ ಮಹಾಪೂಜೆ ಹಾಗೂ ನಂತರ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ಹಾಗೂ ಬಳಿಕ “ಗಗ್ಗರ”ಎಂಬ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ಶನಿದೇವರ ಕೃಪೆಗೆ ಪಾತ್ರರಾಗುವಂತೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ವಿನಂತಿಸಿದ್ದಾರೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ, ಅಧ್ಯಕ್ಷರಾಗಿ ಭಾಸ್ಕರ್ ಎಸ್ ಕೋಟ್ಯಾನ್, ದೀಪ ಪ್ರಜ್ವಲನೆ ಶಾಸಕ ವಿ. ಸುನಿಲ್ ಕುಮಾರ್, ಧಾರ್ಮಿಕ ಪ್ರವಚನ ಮುನಿಯಾಲು ಆಯುರ್ವೇದಿಕ್ ಕಾಲೇಜು ಮಣಿಪಾಲದ ಪ್ರಾಧ್ಯಾಪಕರಾದ ಹರಿಪ್ರಸಾದ್ ಭಟ್ ಹೆರ್ಗ ಮತ್ತು ಮುಖ್ಯ ಅತಿಥಿಗಳಾಗಿ ಬೋಳ ಪ್ರಶಾಂತ್ ಕಾಮತ್, ಪ್ರಸಾದ್ ಭಟ್, ಅಶೋಕ್ ಸುವರ್ಣ, ಕಿರಣ್ ಕುಲಾಲ್, ಸುನಿಲ್ ನಿಟ್ಟೆ ಹರಿಪ್ರಸಾದ್ ಭಟ್ ಹೆರ್ಗ ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ.








