26.7 C
Udupi
Saturday, April 25, 2026
spot_img
spot_img
HomeBlogಕಾರ್ಕಳ ತಾಲೂಕು ಹಿರಿಯ ನಾಗರಿಕರ ಸಂಘದ ವತಿಯಿಂದ ಸಾಧಕರಿಗೆ ಸನ್ಮಾನ

ಕಾರ್ಕಳ ತಾಲೂಕು ಹಿರಿಯ ನಾಗರಿಕರ ಸಂಘದ ವತಿಯಿಂದ ಸಾಧಕರಿಗೆ ಸನ್ಮಾನ

ಕಾರ್ಕಳ, ಸೆ. 25: ಕಾರ್ಕಳ ತಾಲೂಕು ಹಿರಿಯ ನಾಗರಿಕರ ಸಂಘದ ವತಿಯಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಸೆ. 24ರಂದು ಶಾರದಾ ಮಂಜುನಾಥ ಪೈ ಸಭಾಭವನದಲ್ಲಿ ಜರಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಇಸ್ರೋ ವಿಜ್ಞಾನಿ ಅವರು ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಹಿರಿಯ ನಾಗರಿಕರ ಸಂಘದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಹಾಗೂ ರೋಗಿಗಳಿಗೆ ಸಹಾಯ ಮಾಡುವ ಯೋಜನೆ ಹಾಕಿಕೊಳ್ಳಬೇಕು ಜೊತೆಗೆ ಹಿರಿಯ ನಾಗರಿಕರಿಗೆ ಆಗತ್ಯವಿರುವ ಮಾಹಿತಿ ಕೊಡುವ ಕಾರ್ಯಗಾರ ನಡೆಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಉಪಾಧ್ಯಕ್ಷ ಐ. ಮೋಹನ್‌ಾಸ್ ಪೈ ಅವರು ಮಾತನಾಡಿ, ಸಂಘದ ಧೈಯ ಉದ್ದೇಶಗಳನ್ನು ತಿಳಿಸಿದರು. ಗೌರವಾಧ್ಯಕ್ಷ ಡಾ. ಮಂಜುನಾಥ್ ಕಿಣಿ ಅವರು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಮಾಜ ಸೇವಕ ಗೋಪಾಲಕೃಷ್ಣ ಪ್ರಭು ಮತ್ತು ನಿವೃತ್ತ ಶಿಕ್ಷಕಿ, ಕಥೆ, ಕವನ, ನಾಟಕ ಲೇಖಕಿ ಸುಮತಿ ಬಾಯಿ ಅವರನ್ನು ಸನ್ಮಾನಿಸಲಾಯಿತು. ಎಂ. ಕಮಲಾಕ್ಷ ಕಾಮತ್ ಮತ್ತು ಶೈಲಜಾ ಎಸ್. ಹೆಗ್ಡೆ ಅವರು ಪರಿಚಯಿಸಿದರು. ಇದೆ ಸಂದರ್ಭದಲ್ಲಿ ಸಂಘದ ವಾರ್ಷಿಕ ಮಹಾಸಭೆಯನ್ನು ನಡೆಸಲಾಯಿತು. ಮಿತ್ರ ಪ್ರಭಾ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಪ್ರದೀಪ್ ನಾಯಕ್ ವರದಿ ವಾಚಿಸಿದರು. ಕೋಶಾಧಿಕಾರಿ ಎಂ. ಕಮಲಾಕ್ಷ ಕಾಮತ್ ಲೆಕ್ಕಪತ್ರ ಮಂಡಿಸಿರು. ಜೊತೆ ಕಾರ್ಯದರ್ಶಿ ಜಗದೀಶ್ ಗೋಖಲೆ ಸನ್ಮಾನ ಕಾರ್ಯಕ್ರಮ ಸಂಯೋಜಿಸಿದರು. ರತ್ನಾಕರ ಮರಾಠಿ ಕಾರ್ಯಕ್ರಮ ನಿರೂಪಿಸಿ ವೆಂಕಟರಾಯ ಪ್ರಭು ವಂದಿಸಿದರು. ಜಯರಾಮ್ ಪ್ರಭು ಪ್ರಾರ್ಥಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page