
ಕಾರ್ಕಳ: ತಾಲೂಕಿನ ಮುಡಾರು ಗ್ರಾಮದ ಬಜೆಗೋಳಿಯಲ್ಲಿರುವ ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ಗೋಶಾಲೆಯಿಂದ ದುಷ್ಕರ್ಮಿಗಳು ಮೂರು ದನಗಳನ್ನು ಕಳವು ಮಾಡಿರುವುದಾಗಿ ವರದಿಯಾಗಿದೆ.
ಹತ್ತು ಸಾವಿರ ರೂಪಾಯಿ ಮೌಲ್ಯದ ದನಗಳು ಕಳುವಾಗಿದ್ದು, ಈ ಬಗ್ಗೆ ಟ್ರಸ್ಟ್ ನ ಸಂಚಾಲಕ ಎಂ ಕೆ ವಿರಂಜಯ್ ಅವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



















