
ಕಾರ್ಕಳದ ಕಾಬೆಟ್ಟುವಿನಲ್ಲಿ ತರಂಗ ಟ್ಯೂಷನ್ ಸೆಂಟರನ್ನು PWD ಗುತ್ತಿಗೆದಾರರಾದ ಅಶೋಕ್ ಶೆಟ್ಟಿಯವರು ಮೇ 31 ರಂದು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಸರ್ವತೋಮುಖ ಅಭಿವೃದ್ಧಿಗೆ ಟ್ಯೂಷನ್ ಸೆಂಟರ್ ಅತ್ಯಂತ ಪ್ರಯೋಜನಕಾರಿ ಎಂದು ಮಾತನಾಡಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ವಾಸುದೇವ್ ರಾವ್ ಕಾಬೆಟ್ಟು, ಮಂಜುಶೆಟ್ಟಿ ಸಾಣೂರು, ತರಬೇತುದಾರರಾದ ಅಕ್ಷತಾ ರಾವ್, ಅಭಿಷೇಕ್ ಆಚಾರ್ಯ ಉಪಸ್ಥಿತರಿದ್ದರು.ಆಶಾಲತ ಪ್ರಾರ್ಥಿಸಿದರು. ರಾಜೇಶ್ ಆಚಾರ್ಯ ನಿರೂಪಿಸಿ ವಂದಿಸಿದರು.






























