
ಕಾರ್ಕಳ : ‘ಹರ ಮುನಿದರೆ ಗುರು ಕಾಯ್ವನು’ ಎಂಬ
ಮಾತಿನಂತೆ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ
ಪ್ರಮುಖ ಸ್ಥಾನವಿದೆ. ಪ್ರತೀ ವರ್ಷ ಆಷಾಢ ಮಾಸದ
ಹುಣ್ಣಿಮೆಯನ್ನು ಗುರು ಪೂರ್ಣಿಮೆಯಾಗಿ
ಆಚರಿಸಲಾಗುತ್ತದೆ. ದೀಪ ತಾನು ಉರಿದು ಜಗತ್ತಿಗೆ ಬೆಳಕು
ನೀಡುವ ಹಾಗೆ ಶಿಕ್ಷಕರು ತಮ್ಮ ಜ್ಞಾನದೀವಿಗೆಯನ್ನು
ಬೆಳಗುತ್ತಾರೆ. ಗುರುಗಳ ಪ್ರೇರಣೆ ಒಂದಿದ್ದರೆ
ಯಾವುದೇ ಸಾಧನೆ ಮಾಡಲು ಸಾಧ್ಯ.ಈ ದಿನವು ಗುರು ಶಿಷ್ಯ
ಪರಂಪರೆಯನ್ನು ತಿಳಿಸುವ ಅತ್ಯಂತ ಮಹತ್ವದ ದಿನವಾಗಿದೆ
ಎಂದು ಕಾರ್ಕಳದ ಎಸ್.ವಿ.ಟಿ.ಮಹಿಳಾ ಕಾಲೇಜಿನ ನಿವೃತ್ತ
ಪ್ರಾಂಶುಪಾಲರಾಗಿರುವ ಪ್ರೊ. ಮಿತ್ರ ಪ್ರಭಾ ಹೆಗ್ಡೆ
ಹೇಳಿದರು.
ಇವರು ಕಾರ್ಕಳ ಜ್ಞಾನಸುಧಾ ಪ್ರೌಢಶಾಲೆಯಲ್ಲಿ ನಡೆದ
ಗುರು ಪೂರ್ಣಿಮೆಯ ಆಚರಣೆ ಮತ್ತು ಗುರು ವಂದನಾ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಲವು ವ಼ರ್ಷಗಳಿಂದ ಜ್ಞಾನಸುಧಾ ಪ್ರೌಢಶಾಲೆಯಲ್ಲಿ ಸೇವೆ
ಸಲ್ಲಿಸುತ್ತಿರುವ ಶಿಕ್ಷಕಿಯರಾದ ಲತಾ ಡಿಸೋಜಾ, ಶೋಭಾ ಪೈ,
ಮಲ್ಲಿಕಾ ನಾಯಕ್ ಇವರಿಗೆ ವಿದ್ಯಾರ್ಥಿಗಳು
ಗುರುವಂದನೆಯನ್ನು ಸಲ್ಲಿಸಿ ಈ ಮೂಲಕ ಎಲ್ಲಾ ಗುರುಗಳ
ಆರ್ಶೀವಾದವನ್ನು ಪಡೆದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ ಹಾಗೂ ಜ್ಞಾನಸುಧಾ
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದಿನೇಶ್ ಎಂ
ಕೊಡವೂರು, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿರುವ ಜ್ಯೋತಿ
ಪದ್ಮನಾಭ ಭಂಡಿ, ಜ್ಞಾನಸುಧಾ ಶಾಲೆ ಮತ್ತು
ಪ್ರೌಢಶಾಲೆಯ ಉಪಪ್ರಾಂಶುಪಾಲೆಯಾಗಿರುವ ವಾಣಿ.ಕೆ,
ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿನಿ ಕುಮಾರಿ ವೈಷ್ಣವಿ
ಶೆಟ್ಟಿಗಾರ್ ಗುರುಪೂರ್ಣಿಮೆಯ ಆಚರಣೆಯ
ಮಹತ್ವವನ್ನು ಹೇಳಿದರು.
ಶಿಕ್ಷಕಿ ಸುಪ್ರಿಯಾ ನಿರೂಪಿಸಿ, ವಿದ್ಯಾರ್ಥಿನಿಯರಾದ ಪ್ರಕೃತಿ
ಸ್ವಾಗತಿಸಿ, ಸಾಕ್ಷಿ ಶೆಟ್ಟಿ ಧನ್ಯವಾದವಿತ್ತರು.






















































