
ಕಾರ್ಕಳ, ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ, ಇಲ್ಲಿ ಆಯೋಜಿಸಿದ್ದ 14ರ
ವಯೋಮಿತಿಯೊಳಗಿನ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕಾರ್ಕಳ
ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಾದ ಜಿ ಡಿ
ತ್ರಿಭುವನ್ ಮತ್ತು ಪೀಹು ಪಿ ಮೆಂಡನ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಜಿ ಡಿ ತ್ರಿಭುವನ್ ಇವರು ಕಾರ್ಕಳದ ಜಿ.ಡಿ.ದಿನೇಶ್ ಹಾಗೂ ಎ.ಪಿ.ವನಿತಾ ಅವರ
ಸುಪುತ್ರನಾಗಿದ್ದು, ಪೀಹು ಪಿ ಮೆಂಡನ್ ಇವರು ಮಲ್ಪೆಯ ಪುರಂದರ್ ಮೆಂಡನ್
ಹಾಗೂ ಜ್ಯೋತಿ ಇವರ ಸುಪುತ್ರಿಯಾಗಿರುತ್ತಾಳೆ.
ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು
ಅಭಿನಂದಿಸಿದ್ದಾರೆ.






















































