ಜೀವನದಲ್ಲಿ ಸಾಧಿಸುವ ಛಲ ಇದ್ದರೆ ಯಶಸ್ಸು ನಿಮ್ಮದೇ: ಡಾ. ಹರ್ಷ ಪ್ರಿಯಂವದ

ಕಾರ್ಕಳ: ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಯ ಪ್ರಾರಂಭೋತ್ಸವ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ. ಕಾರ್ಯಕ್ರಮದ ಉದ್ಘಾಟಕರಾಗಿ ಡಾ.ಹರ್ಷ ಪ್ರಿಯಂ ವದ IPS , ಕಾರ್ಕಳ ಪೊಲೀಸ್ ವರಿಷ್ಟಾಧಿಕಾರಿ ಮುಖ್ಯ ಅತಿಥಿ ಶ್ರೀಮತಿ ಲಕ್ಷ್ಮೀ ನಾಯಕ್ ಉದ್ಯಮಿಗಳು ಉಪಸ್ಥಿತರಿದ್ದರು.
ಉದ್ಘಾಟನೆ ನೆರವೇರಿಸಿದ ಡಾ.ಹರ್ಷ ಪ್ರಿಯಂವದ IPS ಮಾತನಾಡಿ, ಜೀವನದಲ್ಲಿ ಏನಾದ್ರೂ ಸಾಧಿಸಲು ಗುರಿಯನ್ನು ಇಟ್ಟು ಸಾಧಿಸಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿ ಆಗ ಛಲ ಇದ್ದರೆ ಜೀವನ ಯಶಸ್ವಿ ಆಗುತ್ತದೆ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿ ಶ್ರೀಮತಿ ಲಕ್ಷ್ಮೀ ನಾಯಕ್ ಮಾತನಾಡಿ, ಶಾಲೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಶುಭವನ್ನು ಹಾರೈಸಿದರು.
ನಿವೃತ್ತ ಸುಬೇದಾರ್ ಅಜಿತ್ ಕುಮಾರ್ ಜೈನ್ ಅವರು ಮಾತನಾಡಿ, ಪ್ರಾರಂಭೋತ್ಸವ ದ ಮೊದಲ ದಿನ ದ ಖುಷಿ ಕೊನೆಯವರೆಗೂ ಇರಲಿ, ಚಿಕ್ಕ ಚಿಕ್ಕ ಸಾಧನೆಗಳು ನಿಮ್ಮ ದೊಡ್ಡ ಸಾಧನೆಗೆ ಮೆಟ್ಟಿಲಾಗಲಿ ಎಂದು ಶುಭ ಹಾರೈಸಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಚಿತ್ತರಂಜನ್ ಶೆಟ್ಟಿ ಅವರು ,ಜೇಸಿ ಸಂಸ್ಥೆ ಕೇವಲ ಮಾರ್ಕ್ಸ್ ತೆಗೆಯುವ ಮೆಷಿನ್ ಥರ ಕೆಲಸ ಮಾಡುತ್ತಿಲ್ಲ, ವ್ಯಕ್ತಿತ್ವ ವಿಕಸನ ಕೂಡ ನಮ್ಮ ಧ್ಯೇಯ. ಅತೀ ಹೆಚ್ಚು ರ್ಯಾಂಕ್ ಪಡೆದ ಸಂಸ್ಥೆ ಜೇಸಿ ಆಂಗ್ಲ ಮಾಧ್ಯಮ ಸಂಸ್ಥೆ, ಎಲ್ಲ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ರಾಗಿರುವಾದಕ್ಕೆ ಹರ್ಷವನ್ನು ವ್ಯಕ್ತ ಪಡಿಸಿ ಅಭಿನಂದಿಸಿದರು.
SSLC ಪರೀಕ್ಷೆಯಲ್ಲಿ ರಾಜ್ಯಮಟ್ಟದ ಸಾಧನೆಗೆ ಹಾಗೂ ಉತ್ತಮ ಅಂಕ ಗಳಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಗೌರವಿಸಲಾಯಿತು.
ನಿವೃತ್ತ ಸೈನಿಕರಾದ ಶ್ರೀ ಸುಬೇದಾರ್ ಅಜಿತ್ ಕುಮಾರ್ ಜೈನ್ ಇವರನ್ನು ಕೂಡ ಈ ಸಂದರ್ಭದಲ್ಲಿ ಜೇಸಿಐ ಕಾರ್ಕಳ ಹಾಗೂ ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಚಿತ್ತರಂಜನ್ ಶೆಟ್ಟಿ ಉಪಾಧ್ಯಕ್ಷರು ಪದ್ಮಪ್ರಸಾದ್ ಜೈನ್, ಜೇಸಿಐ ಕಾರ್ಕಳ ದ ಅಧ್ಯಕ್ಷರು ಜೇಸಿ ಶ್ವೇತಾ ಎಸ್ ಜೈನ್, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ, ಮುಖ್ಯ ಶಿಕ್ಷಕಿ ಶ್ರೀಮತಿ ಸುರೇಖಾ ರಾಜ್ , ಕಾರ್ಯಕ್ರಮ ಸಂಯೋಜಕರು ಶ್ರೀಮತಿ ವಂದನಾ ರೈ ಹಾಗೂ, ಶ್ರೀಮತಿ ರಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುರೇಶ್ ರವರು ಕಾರ್ಯಕ್ರಮ ನಿರ್ವಹಿಸಿ, ರಕ್ಷಾ ಶೆಟ್ಟಿ ಧನ್ಯವಾದ ನೆರವೇರಿಸಿದರು.






















































