
ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು, ಜೋಡುರಸ್ತೆಯ ನಿವಾಸಿ ಸುಧಾಕರ್ ಶೆಟ್ಟಿ ಇವರು ಬ್ರಹ್ಮಾವರ ತಾಲೂಕು, ಬಾರ್ಕೂರು ಗ್ರಾಮದ ನಿವಾಸಿ ಪ್ರಸನ್ನ ಆಚಾರ್ಯ ಇವರ ವಿರುದ್ಧ ದಾಖಲಿಸಿದ ಚೆಕ್ ಬೌನ್ಸ್ ಪ್ರಕರಣದ ತನಿಖೆ ನಡೆಸಿದ ಮಾನ್ಯ ನ್ಯಾಯಾಧೀಶರಾದ ಕೋಮಲ ಆರ್.ಸಿ ಇವರು ಆರೋಪಿಯಾದ ಪ್ರಸನ್ನ ಆಚಾರ್ಯ ಇವರನ್ನು ಸರಿಯಾದ ಸಾಕ್ಷದರಗಳಿಂದ ಪ್ರಕರಣ ಸಾಬೀತಾಗದ ಕಾರಣ ದೋಷಮುಕ್ತಗೊಳಿಸಿ ತೀರ್ಪು ನೀಡಿರುತ್ತಾರೆ. ಆರೋಪಿಯ ಪರವಾಗಿ ಕಾರ್ಕಳದ ನ್ಯಾಯಾವಾದಿ ರವಿಶಂಕರ್ ಬಿ.ಎಂ ಇವರು ವಾದಿಸಿದ್ದರು.



















