
ಕಾರ್ಕಳ: ಗಾಂಜಾ ಸೇವನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಝೀಶಾನ್ ಝಾಕೀರ್ ಅಹಾಮ್ಮದ್(26) ಎಂಬಾತ ದಿನಾಂಕ ಜ.9 ರಂದು ಸಂಜೆ 5 ಗಂಟೆ ವೇಳೆಗೆ ಕಾರ್ಕಳ ಕಸಬಾ ಗ್ರಾಮದ ಗಾಂಧಿ ಮೈದಾನದ ಬಳಿ ಮಾದಕ ವಸ್ತು ಗಾಂಜಾವನ್ನು ಪೇಪರ್‌ನಲ್ಲಿ ರೋಲ್ ಮಾಡಿ ಸಿಗರೇಟು ರೀತಿ ಸೇದುತ್ತಿದ್ದು, ಈ ವೇಳೆ ಕಾರ್ಕಳ ನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಪಾದಿತನು ಮಾದಕ ವಸ್ತು ಗಾಂಜಾವನ್ನು ಸೇವನೆ ಮಾಡಿರುವುದು ಖಚಿತವಾಗಿದೆ. ಹೀಗಾಗಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.



















