
ಇಂದು ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಸಲುವಾಗಿ ಸಪ್ತಗಿರಿ ಕ್ಯಾಂಪಸ್ ಹಿರ್ಗಾನದಲ್ಲಿ ‘ಕ್ರಿಯೇಟಿವ್ ಅವಿರ್ಭವ್-2025’ ವಿಜೃಂಭಣೆಯಿಂದ ನಡೆಯಲಿದೆ.
ಡಾ. ಜಿ. ರಾಮಕೃಷ್ಣ ಆಚಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕರಾದ ವಿ ಸುನಿಲ್ ಕುಮಾರ್, ಮಿಯ್ಯಾರು ಕಂಬಳ ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾದ ಕೆ ಗುಣಪಾಲ್ ಕಡಂಬ, ಸೂ ಫ್ರಮ್ ಸೋ ಖ್ಯಾತಿಯ ಶನಿಲ್ ಗೌತಮ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 2:30 ರಿಂದ ಕವಿ, ನಾಟಕಕಾರರು, ವಿಮರ್ಶಕರು ಮತ್ತು ಸಾಹಿತಿಗಳಾದ ದಿ. ಎಚ್. ಎಸ್. ವೆಂಕಟೇಶಮೂರ್ತಿ ಇವರಿಂದ ‘ಭಾವ ನಮನ’ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಯಿಂದ ಕ್ರಿಯೇಟಿವ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಲಿದ್ದು ಸಂಜೆ 7:00 ಯಿಂದ ಪ್ರಖ್ಯಾತ ಜಾದುಗಾರರಾದ ಕುದ್ರೋಳಿ ಗಣೇಶ್ ಇವರಿಂದ ‘ಮ್ಯಾಜಿಕ್ ಶೋ’ ನಡೆಯಲಿದೆ.



















