27.7 C
Udupi
Monday, April 13, 2026
spot_img
spot_img
HomeBlogಕಾರ್ಕಳ: ಎಫ್. ಟಿ.ಕೆ ತರಬೇತಿ ಉದ್ಘಾಟನೆ

ಕಾರ್ಕಳ: ಎಫ್. ಟಿ.ಕೆ ತರಬೇತಿ ಉದ್ಘಾಟನೆ

ಅಂಡರು ವಿಠ್ಠಲ ರುಕ್ಮಿಣಿ ಸಭಾಭವನದಲ್ಲಿ ಕಾರ್ಯಕ್ರಮ

ಉಡುಪಿ ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಡುಪಿ ವತಿಯಿಂದ ಅತಿಸಾರ ತಡೆಗಟ್ಟುವಿಕೆ, ಸುರಕ್ಷಿತ ನೀರು ಮತ್ತು ನೈರ್ಮಲ್ಯ ಬಳಕೆ ಹಾಗೂ ಉತ್ತೇಜನದ FTK ತರಬೇತಿ ಕಾರ್ಯಕ್ರಮವು ಕಾರ್ಕಳ ತಾಲೂಕಿನ ಅಂಡಾರು ವಿಠಲ ರುಕ್ಮಿಣಿ ಸಾಂಸ್ಕೃತಿಕ ಸಭಾ ಭವನ (Svt ಸಭಾ ಭವನ) ದಲ್ಲಿ ನಡೆಯಿತು.


ಉದ್ಘಾಟನೆಯನ್ನು ಕಾರ್ಕಳ ತಾಲೂಕಿನ ಪ್ರಧಾನ ಮಂತ್ರಿ ಪೋಷಣ್ ಅಭಿಯಾನದ (ಅಕ್ಷರದಾಸೋಹದ) ಸಹಾಯಕ ನಿರ್ದೇಶಕರಾದ ಭಾಸ್ಕರ್ ಟಿ ಉದ್ಘಾಟಿಸಿ ನೀರಿನ ಸದ್ಬಳಕೆ ಬಗ್ಗೆ ಮಾಹಿತಿ ನೀಡಿ, ಇದರ ಅಗತ್ಯತೆಯ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಹಾಗೂ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸಂಘದ ಜಿಲ್ಲಾಧ್ಯಕ್ಷರಾದ ಸಂಜೀವ ದೇವಾಡಿಗ, ಕಾರ್ಕಳ ತಾಲೂಕಿನ ಅಧ್ಯಕ್ಷ ರಮಾನಂದ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಭಂಡಾರಿ, ಕಾರ್ಕಳ ತಾಲೂಕಿನ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ಸರಕಾರಿ ನೌಕರರ ಸಂಘದ ಕಾರ್ಕಳ ತಾಲೂಕಿನ ಕಾರ್ಯದರ್ಶಿ ಉಮೇಶ್ ಕೆ. ಎಸ್, ಹೆಬ್ರಿ ತಾಲೂಕಿನ ಅಧ್ಯಕ್ಷ ಹರೀಶ್ ಪೂಜಾರಿ, ಬಿ.ಆರ್.ಸಿ ಸಂಪನ್ಮೂಲ ಕೇಂದ್ರದ ಸಂಯೋಜಕ ಸಂತೋಷ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಬಿ ಎ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ವಚ್ಚ ಭಾರತ್ ಮಿಷನ್ ನ ಜಿಲ್ಲಾ ಸಂಯೋಜಕ ಹಾಗೂ ಸಂಪನ್ಮೂಲ ವ್ಯಕ್ತಿ ರಘುನಾಥ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಉಡುಪಿಯ ಸಮುದಾಯ ಸಂಘಟಕರಾದ ಶ್ರೀಧರ್ ಗೌಡ ವಂದಿಸಿದರು. ಅಧ್ಯಾಪಕ ದೇವದಾಸ್ ಕೆರೆಮನೆ ನಿರೂಪಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page