
ಕಾರ್ಕಳ: ಕಾರ್ಕಳ ಉಪವಿಭಾಗದ ಎಎಸ್ಪಿ ಹರ್ಷ ಪ್ರಿಯಂವದ ಅವರಿಗೆ ಪೊಲೀಸ್ ಅಧೀಕ್ಷಕಿಯಾಗಿ (ಎಸ್ಪಿ) ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇವರನ್ನು ಬೆಂಗಳೂರಿನ ಸಿಐಡಿ ವಿಭಾಗದ ಎಸ್ಪಿಯಾಗಿ ನೇಮಿಸಲಾಗಿದೆ.
2020ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಇವರು ಎಂಬಿಬಿಎಸ್ ಪದವೀಧರೆ. 2025ರ ಫೆಬ್ರವರಿಯಲ್ಲಿ ಕಾರ್ಕಳ ಎಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಇವರು ಅಕ್ರಮ ಕಲ್ಲು ಗಣಿಗಾರಿಕೆ, ಅಕ್ರಮ ಮರಳು ಸಾಗಾಟ ದಂದೆಗೆ ಬಿಸಿ ಮುಟ್ಟಿಸಿದ್ದರು.





