27.4 C
Udupi
Saturday, March 21, 2026
spot_img
spot_img
HomeBlogಕಾರ್ಕಳ ಅನಂತಶಯನ ಶಾರದಾ ಮಹಿಳಾ ಮಂಡಲ, ಮಹಿಳಾ ದಿನಾಚರಣೆ ಸಾಧಕರಿಗೆ ಸನ್ಮಾನ

ಕಾರ್ಕಳ ಅನಂತಶಯನ ಶಾರದಾ ಮಹಿಳಾ ಮಂಡಲ, ಮಹಿಳಾ ದಿನಾಚರಣೆ ಸಾಧಕರಿಗೆ ಸನ್ಮಾನ

ಕಾರ್ಕಳ ಮಾರ್ಚ್ 20 ಕಾರ್ಕಳ ಅನಂತಶಯನದ ಶಾರದಾ ಮಹಿಳಾ ಮಂಡಲ ದವರು ಇಂದು ಹಮ್ಮಿಕೊಂಡ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.

ಶ್ರೀಮತಿ ಶೈಲಜಾ ರತ್ನಾಕರ್ ಮತ್ತು ಸ್ವಾತಿ ತಮಣಕರು ತನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಶ್ರೀಮತಿ ಜ್ಯೋತಿ ಫಾಟಕ್ ನಿರ್ವಹಿಸಿದರು.
ಶಾರದ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಮನೋಹರ್ ವಿಶ್ವ ಮಹಿಳಾ ದಿನಾಚರಣೆಯ ಮಹತ್ವ ತಿಳಿಸುತ್ತಾ ಮಹಿಳಾ ದಿನ ಒಂದು ದಿನ ಮಾತ್ರವಲ್ಲ ವರ್ಷದ 365 ದಿನವೂ ಮಹಿಳೆಯದೆ. ಮಹಿಳೆಯಿಂದ ಆರಂಭವಾಗುವ ದಿನ ಮಹಿಳೆಯ ಇಡೀ ದಿನದ ಕಾರ್ಯಕ್ರಮಗಳು ಕೊನೆಗೆ ತನಗಾಗಿ ಒಂದು ನಿಮಿಷವನ್ನು ಬಳಸಿಕೊಳ್ಳದೆ ಸಂಸಾರಕ್ಕಾಗಿ ದುಡಿಯುವ ಮಹಿಳೆಗೆ ಸಮಾಜದಲ್ಲಿ ಉನ್ನತ ಸ್ಥಾನವಿದೆ ಒಂದು ದಿನ ಮಾತ್ರ ಅಬ್ಬರದ ಕಾರ್ಯಕ್ರಮಗಳಲ್ಲಿ ಮುಳುಗುವುದಲ್ಲ ತನ್ನ ದಿನದ ಸ್ವಲ್ಪ ಸಮಯವನ್ನು ಈ ಕಾರ್ಯಕ್ರಮದ ಮೂಲಕ ಸಂತೋಷ ಸಂಭ್ರಮವನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾಳೆ ಆದ್ದರಿಂದ ಮಹಿಳೆ ಎಲ್ಲರಿಂದ ಗೌರವಿಸಲ್ಪಡುತ್ತಾಳೆ ಎಂದು ನುಡಿಯುತ್ತೆ ಯ ಗಣ್ಯರನ್ನು ಹಾಗೂ ನೆರೆದ ಸರ್ವರನ್ನು ಸ್ವಾಗತಿಸಿದರು. ಉಪಾಧ್ಯಕ್ಷೆ ಶ್ರೀಮತಿ ಉಮಾ ಚಿಪಲೂಣಕಾರ್ ಅತಿಥಿಗಳನ್ನು ಹೂ ನೀಡಿ ಗೌರವಿಸಿದರು.


ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ರಶ್ಮಿ ಶಾರದಾ ಮಹಿಳಾ ಮಂಡಲದ ಕಾರ್ಯಕ್ರಮಗಳನ್ನು ಬಹಳ ವರ್ಷಗಳಿಂದ ಗಮನಿಸುತ್ತಿದ್ದು ಅದ್ಭುತ ಕೆಲಸಗಳನ್ನು ಸಾಮಾಜಿಕ ಕಳಕಳಿಯಿಂದ ನಡೆಸಿಕೊಂಡು ಬರುತ್ತಿದೆ ನನ್ನಂಥವರಿಗೆ ವೇದಿಕೆಯನ್ನು ಕಲ್ಪಿಸಿ ಕೊಡುತ್ತಾ ಇತರ ಎಲೆ ಮರೆಯ ಕಾಯಿಗಳನ್ನು ಬೆಳಕಿಗೆ ತಂದು ಅವರ ಪ್ರತಿಭೆಯನ್ನು ಹೊರ ತರುವಲ್ಲಿ ಅಧ್ಯಕ್ಷರು ಬಹಳ ಶ್ರಮ ವಹಿಸುತ್ತಿದ್ದಾರೆ. ನಾನು ಮೊಟ್ಟ ಮೊದಲ ಭಾಷಣವನ್ನು ಈ ವೇದಿಕೆಯಲ್ಲಿ ಮಾಡುತ್ತಿದ್ದೇನೆ ಇಂತಹ ಅವಕಾಶವನ್ನು ಎಲ್ಲರಿಗೂ ಕಲ್ಪಿಸಿ ಕೊಡುತ್ತಿರುವ ಶಾರದ ಮಹಿಳಾ ಮಂಡಲಕ್ಕೆ ನಾನು ಕೃತಜ್ಞಳು ಎಂದು ನುಡಿದರು.. ನಂತರ ಅವರನ್ನು ಶಾಲು ಹೊಂದಿಸಿ ಪುಸ್ತಕಗಳ ಕೊಡುಗೆ ಹಾಗೂ ಸ್ಮರಣೆಗೆ ನೀಡಿ ಗೌರವಿಸಲಾಯಿತು.
ಶ್ರೀಮತಿ ವಿಜಯ ಹೆಗ್ಡೆ ಮಹಿಳಾ ದಿನ ಆಚರಣೆ ಆರಂಭಗೊಂಡ ಬಗ್ಗೆ ಮತ್ತು ಮುಂದುವರಿದುಕೊಂಡು ಬಂದ ಬಗೆಗೆ ವಿವರವಾಗಿ ತಿಳಿಸುತ್ತಾ ವಿಶ್ವ ಮಹಿಳಾ ದಿನಾಚರಣೆಯ ಮಹತ್ವ ಕುರಿತು ಮಾತನಾಡಿದರು.
ಶಾರದಾ ಮಹಿಳಾ ಮಂಡಲದ ಹಿರಿಯ ಸದಸ್ಯ ಶ್ರೀಮತಿ ಐ ಕೆ ಪ್ರಭಾವತಿ ಅವರ ಬಗ್ಗೆ ಅಧ್ಯಕ್ಷರು ಸನ್ಮಾನಕ್ಕೆ ಒಪ್ಪದ ಶ್ರೀಮತಿಯವರ ಸರಳ ಸಜ್ಜನಿಕೆಯನ್ನು ಪ್ರಸ್ತಾಪಿಸಿ ಒಬ್ಬ ಸಾಮಾನ್ಯ ಗೃಹಿಣಿ ಯಾಗಿದ್ದವರು ವಿಧಿ ಆಟದ ಕೈಗೊಂಬೆಯಾಗಿ ತನಗೆ ಆಧಾರವಾಗಿದ್ದ ಸಂಸಾರದ ಸದಸ್ಯರನ್ನು ಕಳೆದುಕೊಂಡರೂ ಮಗಳು ನಡೆಸುತ್ತಿದ್ದ ಹಿಟ್ಟಿನ ಗಿರಣಿಯನ್ನು ಮುಂದುವರಿಸಿಕೊಂಡು ಹೋಗುವ ಸಮಸ್ಯೆಗಳ ಸವಾಲುಗಳನ್ನು ಎದುರಿಸುವ ಅವರ ಸಾಧನೆಯನ್ನು ಗುರುತಿಸಿ ಸನ್ಮಾನಕ್ಕೆ ಒಪ್ಪಿಸಿದ್ದೇವೆ ಎಂದು ನುಡಿದರು. ಶ್ರೀಮತಿ ಶೈಲಜಾ ರತ್ನಾಕ ರ್ ಅವರ ಪರಿಚಯವನ್ನು ಸಭೆಗೆ ನೀಡಿದರು ಸಭೆಯ ಸಮಸ್ತರ ಪ್ರಚಂಡ ಚಪ್ಪಾಳೆ ಯೊಂದಿಗೆ ಶ್ರೀಮತಿ ಪ್ರಭಾವತಿ ಅವರನ್ನು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶಾಲೋಸಿ ಸ್ಮರಣಿಕೆ ಮತ್ತು ಸಹಾಯಧನವಿತ್ತು ಸನ್ಮಾನಿಸಿದರು. ಶ್ರೀಮತಿ ಪ್ರಭಾವತಿಯವರು ಹೃದಯ ತುಂಬಿ ಬಂದು ಗದ್ಗದ ಸ್ವರದಿಂದ ಧನ್ಯವಾದ ಸಲ್ಲಿಸಿದರು.


ನಂತರ ನಡೆದ ತಿಂಗಳ ಅದೃಷ್ಟವಂತ ಮಹಿಳೆ ಕಾರ್ಯಕ್ರಮವನ್ನು ಕಾರ್ಯದರ್ಶಿ ಸುಧಾ ಪ್ರಭು ನಡೆಸಿಕೊಟ್ಟು ಶ್ರೀಮತಿ ಸ್ವಾತಿ ಸಂತೋಷ ಅದೃಷ್ಟವಂತ ಮಹಿಳೆಯಾಗಿ ಆಯ್ಕೆಗೊಂಡು ಅಧ್ಯಕ್ಷರಿಂದ ಬಹುಮಾನ ಸ್ವೀಕರಿಸಿದರು.
ಶ್ರೀಮತಿ ಶಶಿಕಲಾ ರಾವ್ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು ಕೊನೆಯಲ್ಲಿ ಲಘು ಉಪಹಾರ ವಿತರಿಸಲಾಯಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page