ಮಿಂಚಿನ ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಪಟಾಕಿ ವಶಪಡಿಸಿಕೊಂಡ ಕಾಪು ಪೊಲೀಸರು

ಕಾಪು: ತಾಲೂಕಿನ ಮೂಡಬೆಟ್ಟು ಗ್ರಾಮದ ಒಳ ರಸ್ತೆಯಲ್ಲಿರುವ ಕ್ಲೇರಾ ಮೆಂಡೋನ್ಸ್ ಎಂಬವರ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಅಕ್ರಮ ಪಟಾಕಿ ದಾಸ್ತಾನು ಪತ್ತೆಯಾಗಿದ್ದು ಮಿಂಚಿನ ಕಾರ್ಯಾಚರಣೆ ನಡೆಸಿದ ಉಡುಪಿ ಜಿಲ್ಲೆಯ ಕಾಪು ಪೊಲೀಸರು ಎರಡು ಲಕ್ಷ ರೂಪಾಯಿ ಮೌಲ್ಯದ ವಿವಿಧ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.
ಉಡುಪಿ ನಿವಾಸಿ ಗೌತಮ್ ಪ್ರಭು ಎಂಬಾತ ಕಳೆದ ಹಲವು ವರ್ಷಗಳಿಂದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಬಾಡಿಗೆ ಮನೆ ಪಡೆದು ಮನೆಯಲ್ಲಿ ಪಟಾಕಿ ದಾಸ್ತಾನು ಮಾಡಿರುತ್ತಾರೆ. ದಿನಾಂಕ 29.10.2025 ರಂದು ಪೊಲೀಸ್ ನಿರೀಕ್ಷಕರಾದ ತೇಜಸ್ವಿ ಟಿ. ಐ ಕಾಪು ಪೊಲೀಸ್ ಠಾಣೆ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದು ಲಕ್ಷಾಂತರ ರೂ ಮೌಲ್ಯದ ಅಕ್ರಮ ಪಟಾಕಿಯನ್ನು ವಶಪಡಿಸಿಕೊಂಡಿದ್ದಾರೆ.



















































