
ಕಾಂತಾವರ: ಯಾವುದೇ ಸಂಘಟನೆ ನಿರಂತರ ಚಟುವಟಿಕೆಗಳನ್ನು ಮಾಡಬೇಕಾದರೆ ಸಂಘಟನೆಯ ಸದಸ್ಯರ ಶ್ರಧ್ದೆ,ಭಕ್ತಿ ಪರಿಶ್ರಮ ಮುಖ್ಯ ಸಾಧನೆಯೇ ಕಾರಣ ಎಂದು ಕಾಂತಾವರ ಕ್ಷೇತ್ರದ ಧರ್ಮದರ್ಶಿ ಜೀವಂಧರ ಬಲ್ಲಾಳ್ ರವರ ಕಳೆದ ಜುಲೈ 26 ಭಾನುವಾರದು ಶ್ರೀ ಕ್ಷೇತ್ರ ಕಾಂತಾವರದಲ್ಲಿ ನಡೆದ ಯಕ್ಷದೇಗುಲದ ಯಕ್ಷೋಲ್ಲಾಸ ಸಂಭ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡುತ್ತಾ ಅದ್ಯಕ್ಷತೆ ವಹಿಸಿ ಹೇಳಿದರು.

ಮೂಡಬಿದ್ರೆಯ ಧನಲಕ್ಷ್ಮೀ ಸಮೂಹ ಸಂಸ್ಥೆಯ ಶ್ರೀಪತಿ ಭಟ್ ಮಾತಾಡಿ ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಇಪ್ಪತ್ನಾಲ್ಕು ಯಕ್ಷೋಲ್ಲಾಸ ಪೂರೈಸಿ ಬೆಳ್ಳಿ ಸಂಭ್ರಮದತ್ತ ಸಾಗುವ ಸಂಸ್ಥೆಯ ಕಲಾಸೇವೆಗೆ ಶುಭಹಾರೈಸಿದರು.
ಕಲೆಯನ್ನೇ ಆರಾದಿಸುವ ಕಲಾವಿದನನ್ನು ಸರಸ್ವತಿ ಎಂದೂ ಕೈ ಬಿಡುವುದಿಲ್ಲ ಎಂದರೆ ಕಾಂತಾವರದ ಯಕ್ಷದೇಗುಲ ಸಂಸ್ಥೆ ಉದಾಹರಣೆ ಎಂದು ಕಾರ್ಕಳದ ಉದ್ಯಮಿ ವಿಜಯ ಶೆಟ್ಟಿಯವರು ಹೇಳಿದರು.
ಯಕ್ಷಗಾನದ ಹಿರಿಯ ಕಲಾವಿದರಾದ ಪೂಕಳ ಲಕ್ಷ್ಮೀನಾರಾಯಣ ಭಟ್ ಇವರಿಗೆ ಪುತ್ತೂರು ದಿ.ಶ್ರೀಧರ ಭಂಡಾರಿ ಸಂಸ್ಮರಣಾರ್ಥ ಹಾಗೂ ಬಾಯಾರು ರಮೇಶ್ ಶೆಟ್ಟಿ ಇವರಿಗೆ ಬಾಯಾರು ಪ್ರಕಾಶ್ಚಂದ್ರ ರಾವ್ ಸಂಸ್ಮರಣಾರ್ಥ ಯಕ್ಷದೇಗುಲ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲಾವಿದ ಸಂಘಟಕ ಎಂ ದೇವಾನಂದ ಭಟ್ಟರು ಸಂಸ್ಮರಣೆ ಹಾಗೂ ಅಭಿನಂದನಾ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಕಾಂತಾವರ ಗೆಳೆಯರ ಬಳಗದ ಅದ್ಯಕ್ಷ ಆಶಿಕ್ ಸಾಲ್ಯಾನ್, ಪುತ್ತೂರಿ ಉಷಾ ಶ್ರೀಧರ ಭಂಡಾರಿ, ಬಾಯಾರಿನ ಬಾಲ ಮುರಳಿ ,ಬೇಲಾಡಿ ಪ್ರಭಾಕರ ಕುಲಾಲ್, ಕಾಂತಾವರ ವಿಜಯ ಸಾಲ್ಯಾನ್, ಕೇಮಾರು ಚಂದ್ರಹಾಸ ಜೈನ್ ಉಪಸ್ಥಿತರಿದ್ದರು.
ಬೆಳಿಗ್ಗೆ ಕ್ಷೇತ್ರದ ಪ್ರಧಾನರ್ಚಕ ಕೃಷ್ಣ ಮೂರ್ತಿ ಭಟ್ಟರು ದೀಪ ಬೆಳಗಿಸಿ ಉದ್ಘಾಟಸಿ ಶುಭಾಶಂಸನೆಗೈದರು.
ಯಕ್ಷಗಾನದಲ್ಲಿ ಬಾಲ ಕಲಾವಿದರಾಗಿದ್ದು ಕಳೆದ ಸಾಲಿನ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿ ತೇರ್ಗಡೆಯಾದ ನಾಲ್ಕು ವಿದ್ಯಾರ್ಥಿಗಳಿಗೆ ಒಂದು ಸಾವಿದಂತೆ ವಿದ್ಯಾರ್ಥಿ ವೇತನ, ಕಾಂತಾವರ ಪ್ರಾಥಮಿಕ ಶಾಲೆಗೆ ಹತ್ತು ಸಾವಿರ ವಿದ್ಯಾನಿಧಿ ನೀಡಲಾಯಿತು..
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಹಾವೀರ ಪಾಂಡಿ ಸ್ವಾಗತಿಸಿದರು .
ಅದ್ಯಕ್ಷ ಶ್ರೀಪತಿ ರಾವ್ ಬೆಳುವಾಯಿ, ಕೋಶಾದ್ಯಕ್ಷ ದರ್ಮರಾಜ ಕಂಬಳಿ,
ಸದಸ್ಯರಾದ ಎಲ್ ರಮೇಶ್ ಶೆಟ್ಟಿಗಾರ್, ಲಿಂಗಪ್ಪ ದೇವಾಡಿಗ ರತನ್ ಪಾಂಡಿ, ಸಂದೇಶ್ , ಪವನ್ ಜೈನ್, ಸುರೇಶ್ ಭಟ್, ಕೃಷ್ಣ ಭಟ್ ವೆಂಕಟೇಶ್, ಉದಯ್ ಪಾಟ್ಕರ್, ವೈಶಾಕ್ ರಾಜ್ ವೇದಿಕೆಯಲ್ಲಿ ಸಹಕರಿಸಿದರು.
ಅದ್ಯಾಪಕ ಶಿವಪ್ರಸಾದ್ ಭಟ್ ನಿರೂಪಿಸಿದರು ಉಪನ್ಯಾಸಕ ರಂಜಿತ್ ಜೈನ್ ವಂದಿಸಿದರು.
ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಾವಳಿ ವಿಲಾಸ, ಸುಧನ್ವಾರ್ಜುನ ತಾಳಮದ್ದಳೆ, ಯಕ್ಷಬಾಲಕರಿಂದ ಮತ್ಸ್ಯ, ವರಾಹ, ಮಾರಣಾಧ್ವರ ಯಕ್ಷಗಾನ ನಡೆಯಿತು.

























































