
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು ಘಟಕದ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 398 ನೇ ಜಯಂತಿಯ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮವು ಕಾರ್ಕಳ ನಗರದ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಪರಿಸರದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ನ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್ ಕವಡೆ, ತಾಲೂಕು ಘಟಕದ ಅಧ್ಯಕ್ಷ ಕೆ .ಬಿ.ಕೀರ್ತನ್ ಕುಮಾರ್ ಲಾಡ್, ಡಾ. ಪಲ್ಲವಿ ಕೀರ್ತನ್ ಲಾಡ್, ನಿವೃತ ಮುಖ್ಯೋಪಾಧ್ಯರಾದ ವಸಂತ್ ಎಂ, ಸ್ವಚ್ಛ ಕಾರ್ಕಳ ಬ್ರೀಗೆಡ್ ನ ಫೇಲಿಕ್ಸ್ ವಾಸ್ , ನಿಖಿಲ್ ರಾವ್, ಪವನ್ ರಾವ್,ಬಾಲಾಜಿ ರಾವ್, ಸತೀಶ್ ರಾವ್, ದಿನೇಶ್ ರಾವ್, ಸುಧಾಕರ್ ಕೋಟ್ಯಾನ್, ನಾಗೇಶ್ ರಾವ್, ಪ್ರಶಾಂತ್ ರಾವ್ ಕವಡೆ, ಸನತ್ ರಾವ್, ಕಿಯಾನ್ ರಾವ್, ಉಮೇಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
