
ಕರಕರಿ ಫ್ರೆಂಡ್ಸ್ ಸೇವಾ ಬಳಗ ರಿ. ಕರ್ನಾಟಕ ಇದರ 4ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮ ಇಂದು ಕಾರ್ಕಳ ಅಯ್ಯಪನಗರದಲ್ಲಿರುವ ವಿಜೇತ ವಿಶೇಷ ಶಾಲೆಯಲ್ಲಿ ನೆರವೇರಿತು.
ಸಂಸ್ಥೆಯ ವತಿಯಿಂದ ವಿಜೇತ ವಿಶೇಷ ಶಾಲಾ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆ ಹಾಗೂ ಶಾಲಾ ಶ್ರೇಯೋಭಿವೃದ್ಧಿಗಾಗಿ ದೇಣಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಅವಿನಾಶ್ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರ ಸಮಿತಿ ಅಧ್ಯಕ್ಷರಾದ ಮಂಜುನಾಥ್, ಶೌರ್ಯ & ವಿಪತ್ತು ನಿರ್ವಹಣಾ ಘಟಕದ ತಾಲೂಕು ಅಧ್ಯಕ್ಷರಾದ ಸದಾನಂದ ಸಾಲ್ಯಾನ್, ಕರಕರಿ ಫ್ರೆಂಡ್ಸ್ ಅಧ್ಯಕ್ಷರಾದ ಶ್ರೀನಿವಾಸ ಪೂಜಾರಿ ಎರ್ಲಪಾಡಿ, ಸಂಸ್ಥಾಪಕರಾದ ವೀಣಾ ಎಸ್ ಭಟ್, ಸಂಸ್ಥಾಪಕರಾದ ಅನಿತಾ ಸತೀಶ್, ಕಾರ್ಯದರ್ಶಿ ಸೌಮ್ಯ ಶೆಟ್ಟಿ, ಸದಸ್ಯರಾದ ಸಾನಿಧ್ಯ, ರಾಜೇಶ್ವರಿ ನವೀನ್, ನಾರಾಯಣ್ ಭಟ್, ರತ್ನಾಕರ್ ಶೆಟ್ಟಿ ಎಣ್ಣೆಹೊಳೆ, ವಿಜಯ್, ಸರೋಜಿನಿ ಹೆಗ್ಡೆ, ಸವಿತಾ, ಅಜಿತಾ, ವಿತೀನ್ ಶೆಟ್ಟಿ, ಸುರೇಶ್, ಸವಿನ್, ಅಜಿತ್, ಕುಶಲ ಸುವರ್ಣ, ಸಂತೋಷ್, ಶಶಿಕಾಂತ್, ರಜಿತಾ ಪ್ರಶಾಂತ್, ಸಚಿನ್, ಉಮೇಶ್ ಕೋಟ್ಯಾನ್ ವಾಮದಪದವು, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ಕರಕರಿ ಫ್ರೆಂಡ್ಸ್ ಸೇವಾ ಬಳಗ ರಿ. ಕರ್ನಾಟಕ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಶೇಷ ಶಿಕ್ಷಕಿ ಶ್ರೀನಿಧಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಡಾ. ಕಾಂತಿ ಹರೀಶ್ ಸ್ವಾಗತಿಸಿ, ವಿಶೇಷ ಶಿಕ್ಷಕಿ ಯಶೋಧ ವಂದಿಸಿದರು.