ಕರುಣಾರಸಪೂರಿತವಾದ ರಾಮಾಯಣ

ಮನುಷ್ಯ ಮನುಷ್ಯರ ಹೃದಯವನ್ನು ಬೆಸೆಯುವಂತಹ ಬಾಂಧವ್ಯವನ್ನು ಗಟ್ಟಿಗೊಳಿಸುವಂತಹ ಕೆಲಸವನ್ನು ರಾಮಾಯಣ ಮಾಡುತ್ತದೆ. 24000 ಶ್ಲೋಕಗಳ ರಾಮಾಯಣದಲ್ಲಿ ಪ್ರತಿಯೊಂದು ಅಕ್ಷರವೂ ಮಹತ್ವಪೂರ್ಣವಾದುದು ಮತ್ತು ಇಡೀ ರಾಮಾಯಣವು ಕರುಣಾರಸಪೂರಿತವಾಗಿರುವುದರಿಂದಲೇ ಅದು ಇಂದಿಗೂ ಜನಮನದಲ್ಲಿ ಗಟ್ಟಿಯಾಗಿ ನೆಲೆಯೂರಿ ನಿಲ್ಲುವಂತಾಗಿದೆ ಎಂಬುದಾಗಿ ಪ್ರಸಿದ್ಧ ವಿದ್ವಾಂಸರಾದ ಡಾ. ರಾಘವೇಂದ್ರ ರಾವ್ ಪಡುಬಿದ್ರಿ ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.
ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2025ರ ವರ್ಷ ಪ್ರತೀ ತಿಂಗಳು ರಾಮಸಾಗರಗಾಮಿನೀ ಎಂಬ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸವನ್ನು ಹಮ್ಮಿಕೊಂಡಿದ್ದು ಮಾಲೆಯ ದಶಮ ಸೋಪಾನ ‘ ವಾನರ ವೀರರ ಸ್ನೇಹಸೇತು’ ಎಂಬ ವಿಷಯದ ಕುರಿತು ಅಕ್ಟೋಬರ್ 25 ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ಅವರು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಮುನ್ನ ಇತ್ತೀಚೆಗೆ ಅಗಲಿದ ಸಾಹಿತ್ಯಲೋಕದ ಮಹಾನ್ ಚೇತನ ಡಾ. ಎಸ್. ಎಲ್. ಭೈರಪ್ಪ ಹಾಗೂ ಕಾರ್ಕಳದ ಪ್ರಸಿದ್ಧ ವಕೀಲರಾಗಿದ್ದ ಎಂ.ಕೆ.ವಿಜಯಕುಮಾರ್ ಅವರಿಗೆ ಮೌನ ಪ್ರಾರ್ಥನೆಯೊಂದಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.
ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಶಾರ್ವರಿ ಪ್ರಾರ್ಥಿಸಿದರು. ಸುಲೋಚನಾ ಬಿ.ವಿ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಗಣೇಶ್ ಜಾಲ್ಸೂರು ವಂದಿಸಿದರು.



















































