
ಮಸ್ಕತ್: ಒಮಾನ್ನ ಕರಾವಳಿಯಲ್ಲಿ ಕೊಮೊರೊಸ್ ಧ್ವಜ ಹೊಂದಿದ್ದ ತೈಲ ಹಡಗು ಯೆಮೆನ್ ಬಂದರು ನಗರವಾದ ಏಡೆನ್ಗೆ ತೆರಳುತ್ತಿದ್ದ ವೇಳೆ ಮುಳುಗಡೆಯಾಗಿದ್ದು ಪರಿಣಾಮ, ಟ್ಯಾಂಕರ್ನಲ್ಲಿದ್ದ 13 ಭಾರತೀಯ ಸಿಬ್ಬಂದಿ ಸೇರಿದಂತೆ 16 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಒಮನ್ನ ಡುಕ್ಮ್ ಬಂದರಿನಿಂದ 25 ನಾಟಿಕಲ್ ಮೈಲ್ ದೂರದಲ್ಲಿ ಹಡಗು ಮುಳುಗಿದ್ದು ಈ ಹಡಗಿನಲ್ಲಿ 13 ಭಾರತೀಯ ಮತ್ತು ಶ್ರೀಲಂಕಾದ ಮೂವರು ಸಿಬ್ಬಂದಿಗಳಿದ್ದರು. ನಾಪತ್ತೆಯಾಗಿರುವ ಸಿಬ್ಬಂದಿ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ








