32.7 C
Udupi
Thursday, March 26, 2026
spot_img
spot_img
HomeBlogಎಲ್‌ಪಿಜಿ ಕೊರತೆ: ಸಿಲಿಂಡರ್ ಬುಕಿಂಗ್‌ಗೆ ಹೊಸ ನಿಯಮ, 35 ದಿನಗಳ ಕಾಯುವಿಕೆ ಕಡ್ಡಾಯ

ಎಲ್‌ಪಿಜಿ ಕೊರತೆ: ಸಿಲಿಂಡರ್ ಬುಕಿಂಗ್‌ಗೆ ಹೊಸ ನಿಯಮ, 35 ದಿನಗಳ ಕಾಯುವಿಕೆ ಕಡ್ಡಾಯ

ನವದೆಹಲಿ: ಅಮೆರಿಕ-ಇರಾನ್-ಇಸ್ರೇಲ್ ಸಂಘರ್ಷದ ಪರಿಣಾಮವಾಗಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಎಲ್‌ಪಿಜಿ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಹೊಸ ನಿಯಮಗಳು ಜಾರಿಗೆ ಬಂದಿವೆ.

ಇದೀಗ 14.2 ಕೆಜಿ ಗೃಹಬಳಕೆಯ ಸಿಲಿಂಡರ್ ಅನ್ನು ಒಂದು ಬಾರಿ ಬುಕ್ ಮಾಡಿದ ನಂತರ, ಮುಂದಿನ ಸಿಲಿಂಡರ್ ಬುಕ್ ಮಾಡಲು 35 ದಿನಗಳ ಕಾಲ ಕಾಯಬೇಕಾಗಿದೆ. ಮೊದಲು ಈ ಅವಧಿ 21 ದಿನಗಳಷ್ಟಿತ್ತು. 5 ಕೆಜಿ ಸಿಲಿಂಡರ್‌ಗಳನ್ನು 9 ರಿಂದ 16 ದಿನಗಳ ನಡುವೆ, ಮತ್ತು 10 ಕೆಜಿ ಸಿಲಿಂಡರ್‌ಗಳನ್ನು 18 ರಿಂದ 32 ದಿನಗಳೊಳಗೆ ಬುಕ್ ಮಾಡಲು ಅವಕಾಶ ನೀಡಲಾಗಿದೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಪ್ರಕಾರ, ಒಬ್ಬ ಗ್ರಾಹಕ ತಿಂಗಳಿಗೆ ಗರಿಷ್ಠ ಎರಡು ಸಿಲಿಂಡರ್‌ಗಳವರೆಗೆ ಮಾತ್ರ ಬುಕ್ ಮಾಡಬಹುದು. ಜೊತೆಗೆ, ನೋಂದಾಯಿತ ಮೊಬೈಲ್ ಸಂಖ್ಯೆಯಿಂದಲೇ ಬುಕಿಂಗ್ ಮಾಡಬೇಕು. ಡೆಲಿವರಿ ಸಮಯದಲ್ಲಿ OTP ಆಧಾರಿತ DAC ಪರಿಶೀಲನೆ ಕಡ್ಡಾಯವಾಗಿದೆ.

ಅತ್ಯಾವಶ್ಯಕ ಸಂದರ್ಭಗಳಲ್ಲಿ ಹೆಚ್ಚುವರಿ ಸಿಲಿಂಡರ್ ಬೇಕಾದರೆ, ‘ಹೆಲೋ BPCL’ ಆಪ್ ಮೂಲಕ ಕಾರಣ ಮತ್ತು ಅತಿಥಿಗಳ ವಿವರಗಳನ್ನು ನಮೂದಿಸಬೇಕು. ವರ್ಷಕ್ಕೆ ಗರಿಷ್ಠ 15 ಸಿಲಿಂಡರ್‌ಗಳ ಮಿತಿಯನ್ನೂ ವಿಧಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು 1800-2333-555 ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page