31.1 C
Udupi
Monday, April 13, 2026
spot_img
spot_img
HomeBlogಎಂಜಿನಿಯರಿಂಗ್‌ ಶುಲ್ಕ 7.5% ಏರಿಕೆ: ಖಾಸಗಿ ಕಾಲೇಜು ಸೀಟು ದುಬಾರಿ,

ಎಂಜಿನಿಯರಿಂಗ್‌ ಶುಲ್ಕ 7.5% ಏರಿಕೆ: ಖಾಸಗಿ ಕಾಲೇಜು ಸೀಟು ದುಬಾರಿ,

ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ ಏರಿಕೆ ಇಲ್ಲ…

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಕೋಟಾ ಸೀಟುಗಳ ಶುಲ್ಕವನ್ನು ಶೇಕಡಾ 7.5ರಷ್ಟು ಹೆಚ್ಚಿಸಲು ಸರ್ಕಾರ ಅನುಮತಿ ನೀಡಿದೆ. ಇದರಿಂದ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಎಂಜಿನಿಯರಿಂಗ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಆರ್ಥಿಕ ಭಾರ ಉಂಟಾಗಲಿದೆ. ಆದರೆ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕವನ್ನು ಯಥಾಸ್ಥಿತಿಯಲ್ಲೇ ಉಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಸಿಇಟಿ ಮೂಲಕ ಭರ್ತಿ ಆಗುವ ಖಾಸಗಿ ಕಾಲೇಜುಗಳ ಸರ್ಕಾರಿ ಕೋಟಾ (40%) ಸೀಟುಗಳಿಗೂ, ಕಾಮೆಡ್-ಕೆ ಮೂಲಕ ಭರ್ತಿ ಆಗುವ ಆಡಳಿತ ಮಂಡಳಿ ಕೋಟಾ ಸೀಟುಗಳಿಗೂ ಈ ಶುಲ್ಕ ಹೆಚ್ಚಳ ಅನ್ವಯವಾಗಲಿದೆ. ಕಳೆದ ವರ್ಷದ ಶುಲ್ಕದ ಮೇಲೆ ಶೇಕಡಾ 7.5ರಷ್ಟು ಹೆಚ್ಚಳ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಖಾಸಗಿ ಕಾಲೇಜುಗಳು ಆರಂಭದಲ್ಲಿ ಶೇಕಡಾ 10ರಿಂದ 15ರಷ್ಟು ಹೆಚ್ಚಳಕ್ಕೆ ಒತ್ತಾಯಿಸಿದ್ದರೂ, ಸಚಿವರು ಅದನ್ನು ಕಡಿತಗೊಳಿಸಿ ದೀರ್ಘ ಚರ್ಚೆಯ ನಂತರ 7.5ರಷ್ಟು ಹೆಚ್ಚಳಕ್ಕೆ ಮಾತ್ರ ಒಪ್ಪಿಗೆ ನೀಡಿದ್ದಾರೆ. ಹೊಸ ದರಗಳ ಪ್ರಕಾರ, ಟೈಪ್-1 ಕಾಲೇಜುಗಳಲ್ಲಿ ಸಿಇಟಿ ಸೀಟಿನ ಶುಲ್ಕವು 81,800 ರೂ.ಗಳಿಂದ 87,935 ರೂ.ಗಳಿಗೆ ಏರಿಕೆಯಾಗಲಿದೆ. ಟೈಪ್-2 ಕಾಲೇಜುಗಳಲ್ಲಿ 91,000 ರೂ. ಇದ್ದ ಶುಲ್ಕವು 97,825 ರೂ.ಗೆ ಹೆಚ್ಚಳವಾಗಲಿದೆ. ಅದೇ ವೇಳೆ, ಮ್ಯಾನೇಜ್ಮೆಂಟ್ ಕೋಟಾದಲ್ಲಿ ಟೈಪ್-1 ಕಾಲೇಜುಗಳ ಶುಲ್ಕವು 2 ಲಕ್ಷದಿಂದ 2.15 ಲಕ್ಷ ರೂ.ಗೆ ಮತ್ತು ಟೈಪ್-2 ಕಾಲೇಜುಗಳಲ್ಲಿ 2,81,100 ರೂ. ಇದ್ದದ್ದು 3,02,182 ರೂ.ಗೆ ಏರಿಕೆಯಾಗಿದೆ.

ಇದರ ಜೊತೆಗೆ, ಪ್ರತಿವರ್ಷ ವಿಧಿಸುವ ವಿಶ್ವವಿದ್ಯಾಲಯ ಶುಲ್ಕವಾಗಿ 10,610 ರೂ. ಪಾವತಿಸಬೇಕಾಗುತ್ತದೆ. ಇನ್ನಷ್ಟು ಸೇವೆಗಳ ಹೆಸರಿನಲ್ಲಿ ಕಾಲೇಜುಗಳು ಸುಮಾರು 20 ಸಾವಿರ ರೂ.ವರೆಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಲು ಅವಕಾಶ ನೀಡಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page