
“ಯುವಜನತೆ ದೇಶದ ಸಂಪತ್ತು ಇಂತಹ ಯುವಜನತೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತಾವು ತೋಡಗಿಸಕೊಳ್ಳಬೇಕು. ಸುಸ್ಥಿರ ಸಮಾಜಕ್ಕೆ ಯುವಜನತೆ ಕೊಡುಗೆ ಅಪಾರ. ಆದ್ದರಿಂದ ವಿದ್ಯಾರ್ಥಿಗಳು ಮಾದಕ ವ್ಯಸನದಂತಹ ದುಶ್ಚಟಕ್ಕೆದಾಸರಾಗಬಾರದು” ಎಂದು ಡಾ ಶಮ ಶುಕರ್ ವೈದ್ಯಾಧಿಕಾರಿಗಳುಪ್ರಾಥಮಿಕ ಆರೋಗ್ಯ ಕೇಂದ್ರ, ಹಿರ್ಗಾನ ಕರೆ ನೀಡಿದರು. ಇವರು ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಇದರ ಐಕ್ಯೂಎಸಿ, ರಾಷ್ಟ್ರೀಯ ಸೇವಾ ಯೋಜನೆ ಮತ್ತುಮಾದಕ ದ್ರವ್ಯ ವ್ಯಸನ ತಡೆ ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲಾ ಸರ್ವೆಕ್ಷಣಾ ಘಟಕ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಕಛೇರಿ, ಕಾರ್ಕಳ. ನಗರ ಪೋಲಿಸ್ ಠಾಣೆ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ನಡೆದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತಾನಾಡಿದರು.ಕಾರ್ಯಕ್ರಮದ ಅಧ್ಯಕ್ಞತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಸುರೇಶ್ ರೈ ಕೆ ಮಾತನಾಡಿ ವಿದ್ಯಾರ್ಥಿಗಳು ಹದಿಹರೆಯದಲ್ಲಿ ಸಂಯಮ ಹಾಗೂ ಶಿಸ್ತಿನ ಜೀವನ ನಡೆಸಿದಾಗ ದೇಶದ ಅಭಿವೃದ್ಧಿಗೆ ಕೊಡುಗೆಗಳನ್ನು ನೀಡಬಹುದು ಎಂದುತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರ್ಕಳ ನಗರಆರಕ್ಷಕ ಠಾಣೆ ಕ್ರೈಮ್ ವಿಭಾಗದ ಆರಕ್ಷಣಾ ಅಧಿಕಾರಿಗಳಾದ ಶಿವಕುಮಾರ್ ಎಸ್ ಆರ್ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯದದುಷ್ಪರಿಣಾಮದ ಕುರಿತು ತಿಳಿ ಹೇಳಿದರು. ಪ್ರಭಾರ ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಪ್ರಾಸ್ತಾವಿಕವಾಗಿ ಮಾತಾನಾಡಿ,ಮಾದಕದ್ರವ್ಯದ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಯಾಕೆಅಗತ್ಯ ಎಂದು ಕರೆ ನೀಡಿದರು. ವಾಣಿಜ್ಯಶಾಸ್ತ್ರ ಸಹಪ್ರಾಧ್ಯಾಪಕರಾದ ಡಾ. ಸುದರ್ಶನ್ ಪಿ ಸ್ವಾಗತಿಸಿದರು. ದ್ವಿತೀಯ ಬಿಎ ನರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯದರ್ಶಿ ವಿಲಾಸಿನಿಕಾರ್ಯಕ್ರಮವನ್ನು ನಿರೂಪಿಸಿದರೆ, ರಾಷ್ಟ್ರೀಯ ಸೇವಾಯೋಜನೆಯ ಸ್ವಯಂ ಸೇವಕ ಸೃಜನ್ ವಂದಿಸಿದರು. ವೇದಿಕೆಯಲ್ಲಿವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ವಾಣಿಜ್ಯಶಾಸ್ತ್ರ ವಿಭಾಗದ ಮುಖಸ್ಥೆಡಾ. ಚಂದ್ರಾವತಿ, ಐಕ್ಯೂಎಸಿ ಸಹ ಸಂಚಾಲಕಿ ಸಂಧ್ಯಾ ಭಂಡಾರಿ,ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಪ್ರಸನ್ನ ಕುಮಾರ್ ಉಪಸ್ಥಿತರಿದ್ಧರು.ಕಾರ್ಯಕ್ರಮದಲ್ಲಿ ವಸಂತ ಶೆಟ್ಟಿ ಎಂ. ಎ ಹಿರಿಯ ಆರೋಗ್ಯನಿರೀಕ್ಷಣಾಧಿಕಾರಿಗಳು ಅರುಣಾ ಕುಮಾರಿ ಹಿರಿಯ ಪ್ರಾಥಮಿಕಆರೋಗ್ಯ ಸುರಕ್ಷಾಧಿಕಾರಿ ಹಾಗೂ ನಿರ್ವಹಣಾಶಾಸ್ತ್ರ ಸಹಾಯಕಪ್ರಾಧ್ಯಾಪಕರಾದ ಸುಬ್ರಹ್ಮಣ್ಯ ಕೆ.ಸಿ ಉಪಸ್ಥಿತರಿದ್ಧರು.



















