ಎಂ.ಪಿ.ಎಂ ಕಾಲೇಜು ,ಕಾರ್ಕಳ

ಕಾರ್ಕಳ: ಎಂ.ಪಿ.ಎA ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಕಳದ ವೃತ್ತಿ ಮಾರ್ಗದರ್ಶನ ಮತ್ತು ನೇಮಕಾತಿ ಘಟಕದ ವತಿಯಿಂದ,
ಬೆಂಗಳೂರು ಮೂಲದ ಉನ್ನತಿ ಫೌಂಡೇಶನ್ ಹಾಗೂ ಡಿಲಾಯಿಟ್
ಕಂಪನಿಯ ಸಹಯೋಗದಲ್ಲಿ 90 ಗಂಟೆಗಳ ತರಬೇತಿ
ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ತರಬೇತಿ ಕಾರ್ಯಕ್ರಮಕ್ಕೆ ಸುಮಾರು 80 ವಿದ್ಯಾರ್ಥಿಗಳು
ಎರಡು ಬ್ಯಾಚ್ಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.
ವಿದ್ಯಾರ್ಥಿಗಳ
ವ್ಯಕ್ತಿತ್ವ ವಿಕಸನ ಹಾಗೂ ಉದ್ಯೋಗ ಕೌಶಲ್ಯ
ಅಭಿವೃದ್ಧಿಯನ್ನು ಉದ್ದೇಶವಾಗಿಟ್ಟುಕೊಂಡು
ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ
ಪ್ರಾಂಶುಪಾಲರಾದ ಡಾ. ಸುರೇಶ್ ರೈ ಕೆ ವಹಿಸಿದ್ದರು. ಅವರು
ಮಾತನಾಡಿ, ತರಬೇತಿ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಲ್ಲಿ
ಉತ್ತಮ ಬದಲಾವಣೆಗಳನ್ನು ಕಾಣುವ ನಿರೀಕ್ಷೆಯಿದ್ದು, ಇಂತಹ
ಕೌಶಲ್ಯಾಧಾರಿತ ತರಬೇತಿ ಕಾರ್ಯಕ್ರಮಗಳು
ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಸಿದ್ಧರನ್ನಾಗಿಸಲು ಅತ್ಯಂತ
ಅಗತ್ಯವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೃತ್ತಿ ಮಾರ್ಗದರ್ಶನ ಮತ್ತು
ನೇಮಕಾತಿ ಘಟಕದ ಸಂಯೋಜಕರಾದ ಡಾ. ಸುಬ್ರಹ್ಮಣ್ಯ ಕೆ.ಸಿ
ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಉನ್ನತಿ ಫೌಂಡೇಶನ್, ಬೆಂಗಳೂರು ಸಂಸ್ಥೆಯ ಸಂಪನ್ಮೂಲ
ವ್ಯಕ್ತಿಯಾದ ಗುರುಪ್ರಸಾದ್ ಅವರು ತರಬೇತಿ
ನಡೆಸಿಕೊಡಲಿದ್ದು, ಸಂವಹನ ಕೌಶಲ್ಯ, ಆತ್ಮವಿಶ್ವಾಸ ವೃದ್ಧಿ,
ಸಮಯ ನಿರ್ವಹಣೆ ಹಾಗೂ ಕೃತಕ ಬುದ್ಧಿಮತ್ತೆ ಕುರಿತ
ವಿಷಯಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ
ಪ್ರಸನ್ನ ಕುಮಾರ್ ಹಾಗೂ ಚಂದ್ರಕಾಂತ್ ಶೆಣೈ
ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದ್ವಿತೀಯ ಬಿಬಿಎ ವಿದ್ಯಾರ್ಥಿನಿ ವೈಷ್ಣವಿ
ನಿರೂಪಿಸಿದರು. ಕಾವನಾ ಸ್ವಾಗತಿಸಿದರು. ತೃಷಾ ಪೂಜಾರಿ ವಂದಿಸಿದರು.
ರಕ್ಷಿತಾ ಮತ್ತು ತಂಡ ಪ್ರಾರ್ಥನೆ ನೆರವೇರಿಸಿದರು.


































