20.3 C
Udupi
Friday, December 26, 2025
spot_img
spot_img
HomeBlogಉತ್ತರ ಪ್ರದೇಶದಲ್ಲಿ ಪ್ರವಾಹ – ಅಯೋಧ್ಯೆಯ ಪ್ರಮುಖ ಪ್ರದೇಶಗಳಿಗೆ ನುಗ್ಗಿದ ನೀರು

ಉತ್ತರ ಪ್ರದೇಶದಲ್ಲಿ ಪ್ರವಾಹ – ಅಯೋಧ್ಯೆಯ ಪ್ರಮುಖ ಪ್ರದೇಶಗಳಿಗೆ ನುಗ್ಗಿದ ನೀರು

ಲಕ್ನೋ: ಭಾರೀ ಮಳೆ ನಡುವೆ ನೇಪಾಳದಿಂದ ನೀರು ಬಿಡುಗಡೆಯಾದ ಹಿನ್ನೆಲೆ ಉತ್ತರ ಪ್ರದೇಶದ ಅನೇಕ ನಗರಗಳಲ್ಲಿ ಪ್ರವಾಹ ತೀವ್ರವಾಗುತ್ತಿದೆ. ಬಹ್ರೈಚ್, ಶ್ರಾವಸ್ತಿ, ಗೊಂಡಾ, ಬಲರಾಂಪುರ, ಅಯೋಧ್ಯೆ, ಅಂಬೇಡ್ಕರ್ ನಗರ, ಬಾರಾಬಂಕಿ, ಸೀತಾಪುರದ ಸುಮಾರು 250 ಗ್ರಾಮಗಳು ಪ್ರವಾಹದ ದವಡೆಗೆ ಸಿಲುಕಿವೆ.

ಲಖಿಂಪುರ ಖೇರಿಯ 150, ಶಹಜಹಾನ್‌ಪುರದ 30, ಬದೌನ್‌ನ 70, ಬರೇಲಿಯ 70 ಮತ್ತು ಪಿಲಿಭಿತ್‌ನ 222 ಹಳ್ಳಿಗಳ ದೊಡ್ಡ ಜನಸಂಖ್ಯೆಯು ಪ್ರವಾಹದ ನೀರಿನಿಂದ ಆವೃತವಾಗಿದೆ. ಪೂರ್ವಾಂಚಲದ ಬಲ್ಲಿಯಾದಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಕೆಲವು ಮನೆಗಳು ಕೊಚ್ಚಿಹೋಗಿವೆ.
ಶಹಜಹಾನ್‌ಪುರದಲ್ಲಿ ದೆಹಲಿ-ಲಖನೌ ಹೆದ್ದಾರಿಯಲ್ಲಿ ಗರ್ರಾ ನದಿಯ ಪ್ರವಾಹದ ನೀರಿನಿಂದ ಕಾರುಗಳು, ಬೈಕ್‌ಗಳು ಮತ್ತು ಇತರ ಸಣ್ಣ ವಾಹನಗಳ ಕಾರ್ಯಾಚರಣೆಯನ್ನು ಬಂದ್ ಮಾಡಲಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಪ್ರವಾಹದ ನೀರು ತುಂಬಿ ಸಮಸ್ಯೆ ಉಲ್ಬಣಗೊಂಡಿತು. ರೋಗಿಗಳನ್ನು ಹತ್ತಿರದ ಆಸ್ಪತ್ರೆಗಳಲ್ಲಿ ಸ್ಥಳಾಂತರಿಸಲಾಯಿತು. ಅಜೀಜ್‌ಗಂಜ್ ಪ್ರದೇಶದ ಹೆಚ್ಚಿನ ಕಾಲೋನಿಗಳಲ್ಲಿ ಹಲವು ಅಡಿ ನೀರು ತುಂಬಿತು. ಎನ್‌ಡಿಆರ್‌ಎಫ್ ತಂಡ ಬೆಳಗ್ಗೆಯಿಂದಲೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಮತ್ತು 225 ಜನರನ್ನು ರಕ್ಷಿಸಿತು.
ಅವಧ್‌ನ ಎಂಟು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಪರಿಸ್ಥಿತಿ ನಿಧಾನವಾಗಿ ಸುಧಾರಿಸಲು ಪ್ರಾರಂಭಿಸಿದೆ. ನದಿಗಳು ಕ್ರಮೇಣ ಶಾಂತವಾಗುತ್ತಿವೆ. ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಅಂಬೇಡ್ಕರ್ ನಗರ ಮತ್ತು ಬಹ್ರೈಚ್‌ನಲ್ಲಿ ಸರಯೂ ನೀರಿನ ಮಟ್ಟ ಕಡಿಮೆಯಾಗಿದೆ. ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಗ್ರಾಮಗಳಲ್ಲಿ ನೀರು ಹರಿದು ಹೋಗಿದ್ದು, ಭತ್ತದ ಬೆಳೆ ನಾಶವಾಗಿದೆ.
ಅಯೋಧ್ಯೆಯ ಸರಯೂ ನದಿಯ ನೀರಿನ ಮಟ್ಟ 22 ಸೆಂ.ಮೀ ಕಡಿಮೆಯಾಗಿದೆ. ಅದಾಗಿಯೂ ನದಿ ಅಪಾಯ ಮಟ್ಟದ 10 ಸೆಂ.ಮೀ ಎತ್ತರದಲ್ಲಿ ಹರಿಯುತ್ತಿದೆ. ಪ್ರಮುಖ ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿವೆ. ಸೀತಾಪುರದಲ್ಲಿ ನದಿ ಕೊರೆತಕ್ಕೆ 34 ಮನೆಗಳು ಕೊಚ್ಚಿ ಹೋಗಿವೆ

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page