
ಭೀಮ್ ಆರ್ಮಿ ಸಂಘಟನೆಯ ಮತಿನ್ ಕುಮಾರ್ ಬಿಜಾಪುರ ಎಂಬಾತ ಎ ವನ್ ನ್ಯೂಸ್ ಚಾನಲ್ನಲ್ಲಿ ಉಡುಪಿ ಕೃಷ್ಣ ಮಠದ ಪೇಜಾವರ ಅಧೋಕ್ಷಜ ಪೀಠದ ಶ್ರೀ ವಿಶ್ವ ಪ್ರಸನ್ನ ತೀರ್ಥರಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾನೆ.
ಜೀವ ಬೆದರಿಕೆಯೊಡ್ಡಿ ದುಷ್ಕರ್ಮಿಯ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹರೀಶ್ ಮುಡಾರು ಅವರು ಮತಿನ್ ಕುಮಾರ್ ವಿರುದ್ಧ ಉಡುಪಿ ಠಾಣೆಗೆ ದೂರು ನೀಡಿದ್ದು, ಈ ವೇಳೆ ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಶ್ರೀಕಾಂತ್ ಶೆಟ್ಟಿ, ಮಹೇಶ್ ಬೈಲೂರು, ಉಮೇಶ್ ಸೂಡ, ಗುರುಪ್ರಸಾದ್, ನಿಖಿಲ್ ಮಂಚಿ ಮತ್ತಿತರರು ಉಪಸ್ಥಿತರಿದ್ದರು.





