
ಉಡುಪಿ: ಮೂಡ ನಿಡಂಬೂರು ಗ್ರಾಮದ ಜಿ ಟಿ ಎಸ್ ಶಾಲೆಯ ಎದುರು ವಿದ್ಯಾ ಜ್ಯೋತಿ ಬಿಲ್ಡಿಂಗ್ ನ ಕಾಬ್ರಾಲ್ ಗನ್ ಹೌಸ್ ನಲ್ಲಿ ಅಕ್ರಮವಾಗಿ ಇರಿಸಿದ್ದ ಪಟಾಕಿ ದಾಸ್ತಾನು ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ನಡೆಸಿದ ವೇಳೆ ಒಟ್ಟು ಸುಮಾರು 40 ಕೆಜಿ ತೂಕದ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಯಲ್ಲಿ ಆರೋಪಿ ರೋನಾಲ್ಡ್ ಜಿ.ಕಾಬ್ರಲ್ ಎಂಬಾತನ ಮೇಲೆ ಪ್ರಕರಣ ದಾಖಲಾಗಿದ್ದು, ವಿಚಾರಿಸಿದಾಗ ದೀಪಾವಳಿ ಹಬ್ಬದ ಪ್ರಯುಕ್ತ ಈ ದಾಸ್ತಾನು ಇಡಲಾಗಿದೆ ಎಂದು ತಿಳಿದು ಬಂದಿದೆ.













